ನವದೆಹಲಿ: 2023-24ನೇ ಸಾಲಿನಲ್ಲಿ ರಕ್ಷಣಾ ಉತ್ಪಾದನೆಯ ಮೌಲ್ಯದಲ್ಲಿ ದೇಶವು ಅತ್ಯಧಿಕ ಬೆಳವಣಿಗೆಯನ್ನು ಸಾಧಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ಹೇಳಿದ್ದಾರೆ.
ನವದೆಹಲಿ: 2023-24ನೇ ಸಾಲಿನಲ್ಲಿ ರಕ್ಷಣಾ ಉತ್ಪಾದನೆಯ ಮೌಲ್ಯದಲ್ಲಿ ದೇಶವು ಅತ್ಯಧಿಕ ಬೆಳವಣಿಗೆಯನ್ನು ಸಾಧಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ಹೇಳಿದ್ದಾರೆ.
'2023-24ನೇ ಸಾಲಿನಲ್ಲಿ ರಕ್ಷಣಾ ಉತ್ಪಾದನೆ ಮೌಲ್ಯ ₹1,26,887 ಕೋಟಿಗೆ ತಲುಪಿದೆ. ಆ ಮೂಲಕ ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 16.8ರಷ್ಟು ಪ್ರಗತಿ ಕಂಡಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಭಾರತವನ್ನು ಪ್ರಮುಖ ಜಾಗತಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಮಾರ್ಪಡಿಸಲು ಹೆಚ್ಚು ಅನುಕೂಲಕರವಾದ ವಾತಾವರಣ ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಕ್ಷಣಾ ವಲಯದ ವಿವಿಧ ಉತ್ಪಾದನಾ ತಯಾರಿಕೆ ಘಟಕಗಳಿಗೆ ರಾಜನಾಥ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.