ಕಾಸರಗೋಡು: ನಗರದ ಬ್ಯಾಂಕ್ ರಸ್ತೆಯಲ್ಲಿರುವ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೃಹತ್ ಮರವೊಂದು ಉರುಳಿಬಿದ್ದ ಪರಿಣಾಮ ಪೊಲೀಸ್ ಠಾಣೆ ಆವರಣಗೋಡೆ ಕುಸಿದಿದೆ. ಶುಕ್ರವಾರ ಬೆಳಗ್ಗೆ ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ಏಕಾಏಕಿ ಮರ ಮುರಿದು ಬಿದ್ದಿದೆ. ಇದರಿಂದ ರಸ್ತೆಯಲ್ಲಿ ಅಲ್ಪ ಕಾಳ ವಾಹನ ಸಂಚಾರ ಸಥಗಿತಗೊಂಡಿತ್ತು. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸಥಳಕ್ಕಾಘಮಿಸಿ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ಜನದಟ್ಟಣೆಯಿಂದ ಕೂಡಿದ ರಸ್ತೆ ಇದಾಗಿದ್ದು, ಶಾಲೆಗೆ ರಜೆ ಇದ್ದ ಕಾರಣ ರಸ್ತೆಯಲ್ಲಿ ಜನರಿಲ್ಲದ ಕಾರಣ ಪ್ರಾಣಾಪಾಯ ತಪ್ಪಿತ್ತು.