HEALTH TIPS

ಸನಾತನ ಧರ್ಮಕ್ಕೆ ಸಂತ ಸಮಾಜ ಪ್ರೇರಕ ಶಕ್ತಿಯಾಗಿ ವಿಕಾಸವಾಗಲಿ: ಎಡನೀರು ಮಠದಲ್ಲಿ ಸನಾತನ ಸಂತ ಸಮಾಗಮದಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್

         ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯಸ್ಮರಣೆಯಲ್ಲಿ ಡಾ. ಟಿ.ಶ್ಯಾಮ ಭಟ್ ಇವರ ನೇತೃತ್ವದಲ್ಲಿ ಶ್ರೀ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರ ಸೇವಾರೂಪದಲ್ಲಿ ಶ್ರೀದೇವರಿಗೆ ಸಮರ್ಪಿಸಲ್ಪಟ್ಟ ಗುರುಭವನದ ಉದ್ಘಾಟನ ಸಮಾರಂಭದ ಅಂಗವಾಗಿ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ಸನಾತನ ಸಂತ ಸಮಾಗಮದಲ್ಲಿ ಪೂಜ್ಯ ಯತಿವರೇಣ್ಯರು ಭಾಗವಹಿಸಿ ಆಶೀರ್ವಚನವನ್ನು ನೀಡಿದರು. 

         ಸಮಾಹಿತರಾದ ಯತಿಗಳು ಸಂತಜ್ಯೋತಿಯನ್ನು ಬೆಳಗಿಸಿದರು. ಅಖಿಲ ಭಾರತ ಕುಟುಂಬ ಪ್ರಭೋದನ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ ಜಗತ್ತಿನಲ್ಲಿ ಭಾರತ ಅತ್ಯಂತ ಪ್ರಾಚೀನವಾದ ಸುಸಂಸ್ಕøತ ದೇಶವಾಗಿದೆ. ಕುಟುಂಬ, ವಿದ್ಯಾಲಯಗಳು, ಮಠಗಳು, ಮಂದಿರಗಳು, ಸಂತರು ಸಮಾಜಕ್ಕೆ ಶಕ್ತಿ ನೀಡುತ್ತವೆ. ಹಿಂದಿನ ಕಾಲದಲ್ಲಿ ವಿದ್ಯೆ, ಅನ್ನ, ಔಷಧಿ  ಮಾರಾಟದ ವಸ್ತುವಾಗಿರಲಿಲ್ಲ. ಕೌಟುಂಬಿಕ ಜೀವನದಿಂದ ಬಂಧುತ್ವದ ಭಾವ ಅರಳುತ್ತದೆ. ಸರ್ಕಾರಿ ಸಂಬಂಧಿತ ಎಲ್ಲ ಭಾಗದಲ್ಲಿಯೂ ಭಾರತದ ಸತ್ವವಿದ್ದರೂ ಅದನ್ನು ತಿಳಿಯುವ ವಿದ್ಯೆ ನಮ್ಮಲ್ಲಿಲ್ಲ. ಕನಿಷ್ಠ ವಾರದಲ್ಲಿ ಒಂದು ದಿನ ಹತ್ತುನಿಮಿಷವಾದರೂ ಕುಟುಂಬದ ಸದಸ್ಯರೆಲ್ಲಾ ಒಟ್ಟುಗೂಡಿ ಭಜನೆ ಮಾಡಬೇಕು, ಊಟಮಾಡಬೇಕು. ಮಾತೃಭಾಷೆಯನ್ನು ಎಂದೂ ಮರೆಯಬಾರದು. ಶಿಷ್ಯಕೋಟಿಯನ್ನು ದಾರಿತಪ್ಪದಂತೆ ಮುನ್ನಡೆಸುವಲ್ಲಿ ಸನಾತನಸಂತ ಸಂಗಮವಾಗಲಿ. ಮತಾಂತರಕ್ಕೆ ಬೆಂಬಲವನ್ನು ನೀಡುವ ಅನೇಕ ಸಂಘಟನೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಕೌಟುಂಬಿಕ ಜೀವನದಲ್ಲಿ ಸ್ವದೇಶಿ ಮಾನಸಿಕತೆ ಇರಬೇಕು. ಬೀಳುವವರನ್ನು ಮೇಲೆತ್ತಿ ಸಾಧುಸಂತ ಸಮಾಜ ತಮ್ಮ ತಮ್ಮ ಶಿಷ್ಯವೃಂದಕ್ಕೆ ಹರಸಬೇಕು. ಸನಾತನ ಧರ್ಮಕ್ಕೆ ಸಂತ ಸಮಾಜ ಪ್ರೇರಕ ಶಕ್ತಿಯಾಗಿ ವಿಕಾಸವಾಗಲಿ ಎಂದರು.


ಯತಿಗಳ ಸಂದೇಶ:

  ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು :

ಬೇರೆ ಬೇರೆ ದಾರಿಯನ್ನು ಹಿಡಿಯುವ ಮೂಲಕ ಹಿಂದೂ ಸಮಾಜವು ದಾರಿತಪ್ಪದಂತೆ ನೋಡಿಕೊಳ್ಳಬೇಕಾಗಿದೆ. ಏನೋ ಒಂದು ಆಮಿಷಕ್ಕೆ ಒಳಗಾಗಿ ಯುವಸಮಾಜವು ಧರ್ಮವನ್ನು ಬಿಟ್ಟು ಹೋಗುತ್ತಿರುವುದು ಖೇದಕರ. ಹಿಂದೂಸಮಾಜವು ಹಳಿತಪ್ಪಿದ ರೈಲಿನಂತೆ ಆಗಬಾರದು. ಹಿಂದೂಸಮಾಜದ ಯತಿವರೇಣ್ಯರನ್ನು ಒಟ್ಟುಗೂಡಿಸಿ ಸಮಾಜಕ್ಕೆ ಬಹುದೊಡ್ಡ ಸಂದೇಶವನ್ನು ನೀಡಿರುವುದು ಶ್ಲಾಘನೀಯ. ಸಜ್ಜನರಿಗೂ ಸಂತರಿಗೂ ಅವಿನಾಭಾವ ಸಂಬಂಧವಿದೆ. ಗುರುವಿನ ಸಂಬಂಧವಿದ್ದರೆ ಸಾತ್ವಿಕವಾದ ಭಾವವನ್ನು ಹೊಂದಲು ಸಾಧ್ಯವಿದೆ.

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು :

          ನಮ್ಮ ಕೌಟುಂಬಿಕ ಪದ್ಧತಿ ಪ್ರಪಂಚದ ಎಲ್ಲರಿಗೂ ಬೇಕು ಎನ್ನುವ ಪರಿಸ್ಥಿತಿಯಿರುವಾಗ ನಾವು ಅದನ್ನು ಪಾಲನೆ ಮಾಡಲು ಹಿಂಜರಿಯಬಾರದು. ಸನಾತನ ಧರ್ಮದಲ್ಲಿ ಬದ್ಧತೆಯ ಕೊರತೆಯು ಎದ್ದು ಕಾಣುತ್ತಿದೆ. ಸವಾಲುಗಳನ್ನು ಎದುರಿಸಿ ಮುಂದೆ ಸಾಗಬೇಕಾಗಿ ಧರ್ಮದ ಉಳಿವಿಗೆ ನಾವು ಬದ್ಧತೆಯನ್ನು ಹೊಂದಬೇಕು.

ಶ್ರೀ ಮೂಡಬಿದ್ರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ :

          ಎಡನೀರು ಮಠದಲ್ಲಿ 11 ಮಂದಿ ಯತಿಗಳ ಸಮಾಗಮವಾಗಿದೆ. 11ನೇ ಸ್ಥಾನವು ಶುಭದೃಷ್ಟಿಯನ್ನು ಬೀರುತ್ತದೆ. ಸುಜ್ಞಾನಿ ತನ್ನ ತಪ್ಪನ್ನು ಅರಿಯುವುದಕ್ಕೆ ದಾರಿ ತೋರುವ ಗುರುವಿನತ್ತ ಸಾಗುತ್ತಾನೆ. ಜಾತಿಮತಗಳನ್ನು ದೂರದೆ ನಮ್ಮೊಳಗಿರುವ ದೋಷಗಳನ್ನು ಗುರುತಿಸಿ ಎಲ್ಲಾ ಜಾತಿಗಳಲ್ಲಿ ಸನಾತನ ಪರಂಪರೆಯ ಒಳ್ಳೆಯ ದೈವೀ ಅಂಶಗಳನ್ನು ಗುರುತಿಸಿ ಸನ್ಯಾಸತ್ವದ ಶ್ರೇಷ್ಠತೆಯನ್ನು ಸಾರುವ ಸಂದೇಶವನ್ನು ಕೊಡುವ ಕೆಲಸ ಆಗಬೇಕು ಎಂದರು.

ಶ್ರೀ ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ :

             ಮನೆಯ ಒಳಗಡೆ ಇರುವ ಸಾಮರಸ್ಯದ ಕೊರತೆ ಸರಿಯಾದರೆ ಯಾರ ಮನೆಯಲ್ಲೂ ವಿಚ್ಛೇದನ ಎಂಬ ಶಬ್ದ ಹೊರಡಲು ಸಾಧ್ಯವಿಲ್ಲ. ಶರೀರವೂ ಗುರು ಭವನವಾದಾಗ ದೇವರನ್ನು ಕಾಣಲು ಸಾಧ್ಯವಿದೆ. ಜಗತ್ತನ್ನು ಬೆಳಗಿಸುವ ಬೆಳಕು ಭಾರತವಾಗಿದೆ.

ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು :

       ಪ್ರತಿಯೊಬ್ಬನಿಗೂ ಬದುಕಲು ದೇಶ ಬೇಕು. ದೇಶದಲ್ಲಿ ಸಮಾನ ಮನಸ್ಕರಿದ್ದಾಗ ಅವರ ಸಾಧನೆಗೆ ಅದು ಭೂಮಿಯಾಗುತ್ತದೆ. ನಮ್ಮ ದೇಶದಲ್ಲಿ ಯಾರಿರಬೇಕು ಎಂಬ ನಿರ್ಧಾರವನ್ನು ನಾವು ಮಾಡಬೇಕು. ಸನಾತನ ಧರ್ಮಕ್ಕೆ ಪೂರಕವಾದ ಚಿಂತನೆ ಇಂತಹ ಸಮಾವೇಶಗಳಲ್ಲಿ ಮೂಡಿಬರಲಿ.

ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ :

            ಸಂಸ್ಕಾರದ ಕೊರತೆ ಹೇಗೆ ಏನು ಬಗ್ಗೆ ಚಿಂತನೆ ಮಾಡಬೇಕಾಗಿದೆ. ಇವತ್ತಿನ ಸಮಾಜದ ಸ್ಥಿತಿಯ ಬಗ್ಗೆ ಅರಿಯಬೇಕು. ಸಮಾಜ ಬದಲಾವಣೆ ಆಗಿದೆಯಾ ಎಂಬ ಬಗ್ಗೆ ಚಿಂತಿಸಬೇಕು. ರಾಮಾಯಣ, ಮಹಾಭಾರತ, ಪುರಾಣಗಳನ್ನು ಒಂದೇಕಡೆ ಓದಿಸುವ ಚಿಂತನೆ ಆಗಬೇಕು. ಹಿಂದೂಸಮಾಜ ಪರಿವರ್ತನೆ ಆಗುವ ದಿಕ್ಕಿನತ್ತ ನಾವು ಸಾಗಬೇಕು. ನಕಲಿ ಜಾತ್ಯಾತೀತೆಯ ಬಗ್ಗೆ ಜಾಗೃತರಾಗಿರಬೇಕು.

ಶ್ರೀ ಮಾಣಿಲ ಮಠದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ :

            ನಮ್ಮ ಸಂಸ್ಕøತಿ ಪರಂಪರೆಯ ಮೌಲ್ಯಗಳು ಇನ್ನೂ ಕೇಡಾಗದಂತೆ ನೋಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಬಹಳಷ್ಟು ಆಕ್ರಮಣಗಳು ನಡೆದಿದೆ. ಪ್ರತಿಯೊಂದು ಜಾತಿಗೆ ಅದರದ್ದೇ ಆದ ಮಹತ್ವವಿದ್ದರೂ ಜಾತಿ ಜಾತಿ ವೈಮನಸ್ಸಿನಿಂದ ಸನಾತನ ಹಿಂದೂ ಧರ್ಮದ ಛಿದ್ರವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮಗಿದೆ.

ಶ್ರೀ ಕಣಿಯೂರು ಮಠದ ಶ್ರೀ ಮಹಾಬಲೇಶ್ವರ ಸ್ವಾಮೀಜಿ :

        ಕುಟುಂಬವು ಒಗ್ಗಟ್ಟಿದ್ದರೆ ಗ್ರಾಮ ಸುಭಿಕ್ಷವಾಗುತ್ತದೆ. ಅಂತಃಕಲಹವಿಲ್ಲದೆ ಬಾಳಲು ಸಾಧ್ಯವಿದೆ. ಧರ್ಮದ ಮರ್ಮವನ್ನು ತಿಳಿದುಕೊಂಡು ನಮ್ಮ ಮನೆಯಲ್ಲಿ ಬೋಧನೆ ಮಾಡುವ ಹಿರಿಯರು ಇರಬೇಕು.

ಶ್ರೀ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ :

       ಧರ್ಮಕ್ಕೆ ಇರುವ ಸವಾಲುಗಳಿಗೆ ನಾವು ಹಣತೆಯ ದೀಪವಾಗಿ ಬೆಳಗೋಣ. ಲೋಕಕ್ಕೆ ಕ್ಷೇಮದ ಆಶಯವನ್ನು ಹೊಂದಿರುವ ಹಿಂದೂ ಧರ್ಮದ ದಾರಿಯಲ್ಲಿ ಹಿರಿಯರು ಹಾಕಿಕೊಟ್ಟ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗಳನ್ನು ಮಾಡಿಕೊಂಡು ಮುಂದುವರಿದಾಗಿ ಕ್ಷೇಮವುಂಟಾಗುತ್ತದೆ.

ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು :

           ಗುರುಭವÀನದ ಉದ್ಘಾಟನೆಯ ಕಾರ್ಯಕ್ಕೆ ಅರ್ಥವತ್ತಾಗಿರುವ ಕಾರ್ಯಕ್ರಮ ಇಲ್ಲಿನಡೆಯಬೇಕು. ಸಂತರ ಆಶಯಗಳು ಸಮಾಜಕ್ಕೆ ತಲುಪಬೇಕು ಎಂಬ ಚಿಂತನೆಯನ್ನು ಇಲ್ಲಿ ತರಲಾಗಿದೆ. ನಮ್ಮ ಆಚಾರಗಳಲ್ಲಿ ವ್ಯತ್ಯಾಸಗಳಿದ್ದರೂ ನಮ್ಮೆಲ್ಲರ ವಿಚಾರಗಳೂ ಒಂದೇ. ಹಿಂದೂ ಸಮಾಜದ ಏಳಿಗೆ, ಸಾಮಾಜಿಕ, `Áರ್ಮಿಕ, ಸಾಂಸ್ಕøತಿಕ ಶ್ರೀಮಂತಿಕೆ ಉಳಿಯಬೇಕು. ಸಮಾಜಬಾಂ`Àವರಿಗೆ ಉತ್ತಮ ಸಂಸ್ಕಾರದ ದಾರಿಯನ್ನು ತೋರಲು ಇಂತಹ ಸಮಾಗಮಗಳಿಂದ ಸಾಧ್ಯವಾಗಲಿ.




        ಭಾರತ ಸÀರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಜೋರ್ಜ್ ಕುರಿಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಶ್ರೀಮಠದ ವೇದಪಾಠ ಶಾಲೆಯ ಪ್ರಾಚಾರ್ಯ ಶ್ರೀಕೃಷ್ಣ ಭಟ್ ಮತ್ತು ಶಿಷ್ಯವೃಂದದವರಿಂದ ವೈದಿಕ ಪ್ರಾರ್ಥನೆ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ ಸದಸ್ಯರಿಂದ ಗುರುವಂದನೆ ನಡೆಯಿತು. ಹಿರಣ್ಯ ವೆಂಕಟೇಶ್ವರ ಭಟ್ ನಿರೂಪಿಸಿದರು. ಕೆಯ್ಯೂರು ನಾರಾಯಣ ಭಟ್ ಸ್ವಾಗತಿಸಿ ಉಜಿರೆ ಅಶೋಕ್ ಭಟ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries