ತಿರುವನಂತಪುರ: ಕುಟುಂಬಶ್ರೀ ಆಶ್ರಯದಲ್ಲಿ ೩೩೫೦ ಮಹಿಳೆಯರು ನಿರಪೊಲಿಮ ಯೋಜನೆಯಡಿ ೧೨೫೦ ಎಕರೆಯಲ್ಲಿ ಹೂ ಕೃಷಿ ಆರಂಭಿಸಿದ್ದು, ಓಣಂ ಮಾರುಕಟ್ಟೆಯನನು ಲಕ್ಷö್ಯವಾಗಿರಿಸಲಾಗಿದೆ.
ಈ ಬಾರಿ ಕೇರಳ ಸ್ವಾವಲಂಬಿ ಹೂವುಗಳು ಮತ್ತು ತರಕಾರಿಗಳೊಂದಿಗೆ ಓಣಂ ಅನ್ನು ಆಚರಿಸಬಹುದು ಎಂದು ಸಚಿವ ಎಂ.ಬಿ.ರಾಜೇಶ್ ಈ ಬಗ್ಗೆ ಮಾಹಿತಿ ನೀಡಿರುವರು. ಕುಟುಂಬಶ್ರೀ ಒಂದು ಎಕರೆ ಹೂವಿನ ಕೃಷಿಗೆ ಆವರ್ತ ನಿಧಿಯಾಗಿ ೧೦,೦೦೦ ರೂ.ವಂತೆ ನೆರವು ನೀಡಲಾಗಿದೆ. ಹೂ ಉದ್ಯಮದ ಮೂಲಕ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ‘ನಿರಪೊಲಿಮ’ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪ್ರಸ್ತುತ, ಕುಟುಂಬಶ್ರೀ ಅಡಿಯಲ್ಲಿ ೮೪೩೨೭ ರೈತ ಗುಂಪುಗಳಲ್ಲಿ ೩,೯೨,೬೮೨ ಮಹಿಳೆಯರು ಹೂ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ೧೭೬೩೫ ಹೆಕ್ಟೇರ್ ಭೂಮಿಯನ್ನು ಕೃಷಿಯೋಗ್ಯ ಮಾಡಲಾಗಿದೆ. ತರಕಾರಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿರುವ ಚಟುವಟಿಕೆಗಳನ್ನು ಕುಟುಂಬಶ್ರೀ ಮೂಲಕ ನಡೆಸಲಾಗುತ್ತದೆ. ‘ಅಗ್ರಿ ನ್ಯೂಟ್ರಿ ಗಾರ್ಡನ್’ ಯೋಜನೆ ಮೂಲಕ ರಾಜ್ಯದಲ್ಲಿ ೧೧,೩೦,೩೭೧ ಕುಟುಂಬಗಳು ಪೌಷ್ಟಿಕ ಉದ್ಯಾನಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ. ಪೆರುಂಗಡವಿಲ ಅಣಮುಖದಲ್ಲಿ ಕುಟುಂಬಶ್ರೀಯ ನಿರಪೊಲಿಮ ಮತ್ತು ಓಣಂಕಣಿ ಯೋಜನೆಗಳನ್ನು ಉದ್ಘಾಟಿಸಿಸಚಿವರು ಮಾತನಾಡಿದರು. ೮೮ ಬ್ಲಾಕ್‌ಗಳಲ್ಲಿ ‘ನೇಚರ್ಸ್ ಫ್ರೆಶ್’ ಮಳಿಗೆಗಳು ಕಾರ್ಯಾರಂಭ ಮಾಡಿವೆ.