ಚೆನ್ನೈ: ತಮಿಳುನಾಡಿನ ಬಿಜೆಪಿ ನಾಯಕರಾಗಿದ್ದ ಹಾಗೂ ತಮಿಳುನಾಡಿನಿಂದ ಬಿಜೆಪಿ ಸಂಸದರಾಗಿದ್ದ ಮಾಸ್ಟರ್ ಮಾಥನ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಚೆನ್ನೈ: ತಮಿಳುನಾಡಿನ ಬಿಜೆಪಿ ನಾಯಕರಾಗಿದ್ದ ಹಾಗೂ ತಮಿಳುನಾಡಿನಿಂದ ಬಿಜೆಪಿ ಸಂಸದರಾಗಿದ್ದ ಮಾಸ್ಟರ್ ಮಾಥನ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ತಮಿಳುನಾಡಿನ ಬಡಗ ಸಮುದಾಯದ ನಾಯಕರೂ ಆಗಿದ್ದ ಮಾಥನ್ ಅವರು ನಿಲಗೀರಿ (ಊಟಿ) ಲೋಕಸಭಾ ಕ್ಷೇತ್ರದಿಂದ ಎರಡು ಭಾರಿ (1998 ಮತ್ತು 1999-2004) ಬಿಜೆಪಿ ಸಂಸದರಾಗಿದ್ದರು.
ತಮಿಳುನಾಡಿನಲ್ಲಿ ಬಿಜೆಪಿ ಕಟ್ಟಲು ಶ್ರಮಿಸಿದ್ದ ಅವರು, ಹೆಂಡತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮಾಥನ್ ನಿಧನಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.