HEALTH TIPS

ಭೂಕುಸಿತ, ಹಳಿಗೆ ಬಿದ್ದ ಮರ: ಕರ್ನಾಟಕ-ಗೋವಾ ನಡುವಿನ ರೈಲು ಸಂಚಾರದಲ್ಲಿ ವ್ಯತ್ಯಯ

 ಣಜಿ: ಕರ್ನಾಟಕ-ಗೋವಾ ಗಡಿಭಾಗದ ದೂದ್‌ಸಾಗರ್ ಹಾಗೂ ಸೊನೌಲಿ ನಡುವೆ ಭೂಕುಸಿತ ಸಂಭವಿಸಿ ನೈರುತ್ಯ ರೈಲ್ವೆಯ ಐದು ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಲೊಂಡಾ ಹಾಗೂ ತಿನಯ್‌ಘಾಟ್‌ ನಡುವೆ ಹಳಿಗೆ ಮರಬಿದ್ದಿದ್ದು, ಓವರ್‌ಹೆಡ್ ವಿದ್ಯುತ್‌ ಪೂರೈಕೆಗೆ ತೊಡಕುಂಟಾಗಿದೆ.

ಈ ಎರಡೂ ಘಟನೆಗಳು ಗುರುವಾರ ಮಧ್ಯರಾತ್ರಿ 12.55ರ ವೇಳೆಗೆ ನಡೆದಿದೆ. ಹಳಿ ಮೇಲೆ ಬಿದ್ದಿದ್ದ ಮಣ್ಣು ಹಾಗೂ ಮರವನ್ನು ತೆರವುಗೊಳಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆ ಬಳಿಕ ರೈಲು ಸಂಚಾರ ಪುನಾರಂಭಗೊಂಡಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಾಡಿ ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries