ಪತ್ತನಂತಿಟ್ಟ: ಶಬರಿಮಲೆ ತಂತ್ರಿ ಸ್ಥಾನಕ್ಕೆ ಕಂಠಾರರ್ ರಾಜೀವರ್ ರಾಜೀನಾಮೆ ನೀಡಿದ್ದಾರೆ. ಅವರ ಪುತ್ರ, ಕಂಠಾರರ್ ಬ್ರಹ್ಮದತ್ತ, ತಂತ್ರಿ ಸ್ಥಾನ ವಹಿಸಿಕೊಂಡಿರುವರು.
ಪ್ರಸ್ತುತ ತಂತ್ರಿಯಾಗಿರುವ ಕಂಠಾರರ್ ಮಹೇಶ್ವರ ಮೋಹನ್ ಅವರೊಂದಿಗೆ ತಂತ್ರಿ ಸ್ಥಾನಕ್ಕೆ ಬ್ರಹ್ಮದತ್ತನ ಸೇರ್ಪಡೆಯೊಂದಿಗೆ ಪೀಳಿಗೆಯ ಬದಲಾವಣೆಯು ಪೂರ್ಣಗೊಳ್ಳುತ್ತದೆ.
ಆಗಸ್ಟ್ 16 ರಂದು ಕಂಠಾರ್ ಬ್ರಹ್ಮದತ್ತರ ಸಮ್ಮುಖದಲ್ಲಿ ಮೇಲ್ಶಾಂತಿ ಶಬರಿಮಲೆ ದೇವಾಲಯದ ಗರ್ಭಗೃಹ ಬಾಗಿಲು ತೆರೆಯಲಾಗುವುದು. ಕಂಠಾರರ್ ರಾಜೀವ್ ಅವರು ಕರ್ತವ್ಯ ಬಿಟ್ಟರೂ ಉಪಸ್ಥಿತರಿರುವರು. ಪ್ರತಿ ವರ್ಷ, ಶಬರಿಮಲೆಯಲ್ಲಿ ತಮಮನ್ ಮಠದ ಎರಡು ಕುಟುಂಬಗಳು ತಾಂತ್ರಿಕ ಹಕ್ಕುಗಳನ್ನು ಪರ್ಯಾಯವಾಗಿ ನಿರ್ವಹಿಸುವುದು ವಾಡಿಕೆ. ಪ್ರಸ್ತುತ ತಂತ್ರಿ ಕಂಠಾರರ್ ಮಹೇಶ್ವರ ಮೋಹನರವರು ದಿವಂಗತ ಕಂಠಾರರ್ ಮಹೇಶ್ವರರ ಪುತ್ರ.
ರಾಜೀವ ಮತ್ತು ಬಿಂದು ದಂಪತಿಯ ಪುತ್ರ ಬ್ರಹ್ಮದತ್ತ ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರ. ಒಂದು ವರ್ಷದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ತಾಂತ್ರಿಕ ವಿಧಿ ವಿಧಾನಗಳತ್ತ ಮುಖ ಮಾಡಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್‍ಎಲ್‍ಬಿ ಮುಗಿಸಿರುವÀರು. ಕೊಟ್ಟಾಯಂ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಸಲಹಾ ಕಂಪನಿಯೊಂದರಲ್ಲಿ ಕಾನೂನು ವಿಶ್ಲೇಷಕರಾಗಿಯೂ ಎರಡೂವರೆ ವರ್ಷ ಕೆಲಸ ಮಾಡಿದ್ದಾರೆ. ನಂತರ ಸ್ಕಾಟ್ಲೆಂಡ್‍ನಲ್ಲಿ ಎಲ್‍ಎಲ್‍ಎಂ ಅಧ್ಯಯ£ಗೈದಿದ್ದಾರೆÀ. ಹಿಂದಿರುಗಿ ಹೈದರಾಬಾದಿನ ಕಂಪನಿಗೆ ಸೇರಿಕೊಂಡಿದ್ದರು. ಈ ಮಧ್ಯೆ, ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು.
ಎಂಟು ವರ್ಷಗಳ ಹಿಂದೆ ಬ್ರಹ್ಮದತ್ತ ಚೆಂಗನ್ನೂರು ಮಹಾದೇವ ದೇವಸ್ಥಾನದಲ್ಲಿ ಪೂಜೆ ಮತ್ತು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದರು. ಅವರು ಶಬರಿಮಲೆ ಮತ್ತು ಏಟುಮನೂರಿನ ಕೊಡಿಮರ ಪ್ರತಿಷ್ಠಾಪನೆಯಲ್ಲಿ ತಮ್ಮ ತಂದೆಯೊಂದಿಗೆ ಸಹೋದ್ಯೋಗಿಯಾಗಿದ್ದÀರು. ಕಳೆದ ವರ್ಷ ಕರ್ಕಾಟಕಮಾಸ ಪೂಜೆ ಹಾಗೂ ನಿರಪುತ್ತರಿ ಉತ್ಸವದ ವೇಳೆ ಸನ್ನಿಧಾನಕ್ಕೆ ಬಂದಿದ್ದ ಬ್ರಹ್ಮದತ್ತರಿಗೆ ಪ್ರತಿ ಪೂಜೆಯ ವಿಶೇಷತೆಗಳನ್ನು ನಿಖರವಾಗಿ ನೆರವೇರಿಸಲು ರಾಜೀವ್ ತಂತ್ರಿ ಹೇಳಿಕೊಟ್ಟಿದ್ದರು.