ಕುಂಬಳೆ: ಸೂರಂಬೈಲು ಸÀರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನಾಚರಣೆಯನ್ನು ನಡೆಸಲಾಯಿತು. ನಿವೃತ್ತ ಯೋಧ ಶಿವರಾಮ ಭಟ್ ನಾರಾಯಣಮಂಗಲ ಅವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಬು ಪಿ, ಮುಖ್ಯೋಪಾಧ್ಯಾಯಿನಿ ಸುನೀತ ಎ, ನೌಕರರ ಸಂಘದ ಕಾರ್ಯದರ್ಶಿ ಕಿರಣ್ ಕೆ, ಅಬ್ದುಲ್ ಕರೀಂ ಡಿ.ಕೆ ಉಪಸ್ಥಿತರಿದ್ದರು.