HEALTH TIPS

ರಾಮಸೇತು ನಕ್ಷೆ ಸಿದ್ಧಪಡಿಸಿದ ಇಸ್ರೊ ವಿಜ್ಞಾನಿಗಳು

           ವದೆಹಲಿ: ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳು ರಾಮಸೇತುವಿನ ಅತ್ಯಂತ ವಿವರವಾದ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.

          ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ಈ ಸೇತುವೆಯ ಮೂಲದ ಕುರಿತು ದೀರ್ಘಕಾಲದಿಂದ ಇರುವ ವಿವಾದಗಳನ್ನು ಬಗೆಹರಿಸಲು ಈ ನಕ್ಷೆಯಿಂದ ಸಾಧ್ಯವಾಗಲಿದೆ ಎಂದು ಭಾವಿಸಲಾಗಿದೆ.

29 ಕಿ.ಮೀ. ಉದ್ದದ ಸೇತುವೆಯ ಸಮುದ್ರದಡಿಯ ನಕ್ಷೆಯನ್ನು ಇಷ್ಟೊಂದು ನಿಖರವಾಗಿ ಸಿದ್ಧಪಡಿಸಿದಿರುವುದು ಇದೇ ಮೊದಲು. ಸೇತುವೆಯು ಸಮುದ್ರದ ತಳದಿಂದ ಎಂಟು ಮೀ.ನಷ್ಟು ಎತ್ತರದಲ್ಲಿದೆ ಎಂದು ನಕ್ಷೆಯಲ್ಲಿ ತೋರಿಸಲಾಗಿದೆ.

             'ನಾಸಾದ ಐಸಿಇಸ್ಯಾಟ್-2 ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ನಕ್ಷೆ ಸಿದ್ಧಪಡಿಸಲಾಗಿದೆ. ರಾಮಸೇತು ಮತ್ತು ಅದರ ಉಗಮದ ಬಗ್ಗೆ ಇನ್ನಷ್ಟು ತಿಳಿಯಲು ಇದು ನೆರವಾಗಲಿದೆ' ಎಂದು ಇಸ್ರೊದ ನ್ಯಾಷನಲ್‌ ರಿಮೋಟ್ ಸೆನ್ಸಿಂಗ್ ಸೆಂಟರ್‌ನ ವಿಜ್ಞಾನಿಗಳು ಹೇಳಿರುವುದಾಗಿ 'ಸೈಂಟಿಫಿಕ್ ರಿಪೋರ್ಟ್ಸ್‌'ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

              ನಾಸಾದ ಉಪಗ್ರಹವು ಲೇಸರ್‌ ಆಯಲ್ಟಿಮೀಟರ್‌ ಉಪಕರಣ ಹೊಂದಿದ್ದು, ಅದರ ನೆರವಿನಿಂದ ಸಮುದ್ರದ ಆಳವಿಲ್ಲದ ಪ್ರದೇಶದ ಯಾವುದೇ ರಚನೆಯ ಎತ್ತರವನ್ನು ಅಳೆಯಲು ಸಾಧ್ಯವಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries