ಕಾಸರಗೋಡು: ಅಧ್ಯಾಪಕರಿಗೆಸಗುತ್ತಿರುವ ಅನ್ಯಾಯವನ್ನು ಕೊನೆಗೊಳಿಸಿ ತುಗ್ಲಕ್ ನೀತಿಯಿಂದ ಕೇರಳ ಸರ್ಕಾರ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಕೆ.ಪಿ.ಎಸ್.ಟಿ.ಎ. ನೇತೃತ್ವದಲ್ಲಿ ಡಿ.ಇ. ಕಚೇರಿಗೆ ಮಾರ್ಚ್ ನಡೆಯಿತು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಕೆ.ವಿ.ವಾಸುದೇವನ್ ನಂಬೂದಿರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಜಿ.ಕೆ.ಗಿರೀಶ್, ರಾಜ್ಯ ನಿರ್ವಾಹಕ ಸಮಿತಿ ಸದಸ್ಯರಾದ ಪಿ.ಶಶಿಧರನ್, ಕೆ.ಅನಿಲ್ ಕುಮಾರ್, ಪ್ರಶಾಂತ್ ಕಾನತ್ತೂರು, ಅಶೋಕನ್ ಕೋಡೋತ್, ಯೂಸುಫ್ ಕೊಟ್ಯಾಡಿ, ಸ್ವಪ್ನ ಜಾರ್ಜ್ ಮೊದಲಾದವರು ಮಾತನಾಡಿದರು. ಕಂದಾಯ ಜಿಲ್ಲಾ ಕಾರ್ಯದರ್ಶಿ ಪಿ.ಟಿ.ಬೆನ್ನಿ ಸ್ವಾಗತಿಸಿದರು.