ಕಾಸರಗೋಡು: ಸರ್ವರಿಗೂ ಭೂಮಿ, ಸರ್ವರಿಗೂ ಭೂದಾಖಲೆ, ಸರ್ವ ಸೇವೆಗಳೂ ಸ್ಮಾರ್ಟ್ ಎಂಬ ಗುರಿಯೊಂದಿಗೆ ಕೇರಳ ಸರ್ಕಾರ ಜಾರಿಗೊಳಿಸುವ ಡಿಜಿಟಲ್ ಸರ್ವೆ ಪ್ರಕ್ರಿಯೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಪ್ರಥಮ ಹಂತದಲ್ಲಿ 18 ಗ್ರಾಮಗಳಲ್ಲೂ ಸರ್ವೆ ಪೂರ್ತಿಗೊಳಿಸಲಾಗಿದೆ. ಪ್ರಥಮ ಹಂತದಲ್ಲಿ ಕಾಸರಗೋಡು ವಿಲೇಜನಲ್ಲೂ, ದ್ವಿತೀಯ ಹಂತದಲ್ಲಿ ಪೆರೋಲ್, ಕುಂಜತ್ತೂರು, ಬಾರ, ಇಚ್ಲಂಗೋಡು, ಉದ್ಯಾವರ, ಬೇಕೂರು, ಚೀಮೇನಿ-2 ಎಂಬೀ ಗ್ರಾಮಗಳಲ್ಲೂ ಸರ್ವೆ ಪೂರ್ತಿಗೊಳಿಸಲಾಗಿದೆ. ಪಾಡಿ, ಕಿನಾನೂರು, ಚೀಮೇನಿ, ಪೆರಿಯ, ಕಿದೂರು, ನೆಕ್ರಾಜೆ, ಮಡಿಕೈ ಗ್ರಾಮಗಳಲ್ಲಿ ಡಿಜಿಟಲ್ ಸರ್ವೆ ಪ್ರಗತಿಯಲ್ಲಿದೆ.