ತಿರುವನಂತಪುರಂ: ತಿರುವನಂತಪುರಂ ಪದ್ಮನಾಭಸ್ವಾಮಿ ದೇವಸ್ಥಾನದ ಕಚೇರಿ ಆವರಣದಲ್ಲಿ ಮಾಂಸಾಹಾರ ಸೇವನೆ ಆರೋಪದ ಹಿನ್ನೆಲೆಯಲ್ಲಿ ನೌಕರನೊಬ್ಬನನ್ನು ತನಿಖೆಗಾಗಿ ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ತಂತ್ರಿ ತರಣನನಲ್ಲೂರು ನಂಬೂದಿರಿಪಾಡ್ ಹಾಗೂ ಕವಡಿಯಾರ್ ಅರಮನೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಮಧ್ಯಾಹ್ನ ಚಾಲಕನ ಹುದ್ದೆಯಲ್ಲಿದ್ದ ಉದ್ಯೋಗಿಯೊಬ್ಬರು ಇತರ ಉದ್ಯೋಗಿಗಳೊಂದಿಗೆ ಚಿಕನ್ ಬಿರಿಯಾನಿ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಅಸ್ಪಷ್ಟ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮೊದಲಿಗೆ ಅಧಿಕಾರಿಗಳ ಮೇಲೆಯೇ ಆರೋಪಗಳು ಕೇಳಿ ಬರುತ್ತಿದ್ದವು. ನಂತರ ನೌಕರನನ್ನು ವಿಚಾರಣೆಗೆ ಒಳಪಡಿಸಲಾಯಿತು.
ಈ ಹಿಂದೆ ದೇವಸ್ಥಾನದ ಕಚೇರಿಯ ನೌಕರರಿಗೆ ಆಹಾರ ಸೇವಿಸಲು ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿತ್ತು. ಅಲ್ಲಿ ಸಿಸಿಟಿವಿ. ಕ್ಯಾಮೆರಾ ಕೂಡ ಇದೆ. ಕೋಣೆಯಲ್ಲಿ ಮಾಂಸಾಹಾರ ಸೇವಿಸುವುದು ವಾಡಿಕೆಯಾಗಿತ್ತು.
ಈ ಪದ್ಧತಿಯನ್ನು ನೂತನ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಅಧಿಕಾರಿಗಳು ಪ್ರಶ್ನಿಸಿದರು. ಆದರೆ ದೂರಿನ ಮಟ್ಟಕ್ಕೆ ಏರದ ಕಾರಣ ನಿಯಂತ್ರಣವೇ ಇಲ್ಲದಂತಾಗಿದೆ.
ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಸ್ಥಳದಲ್ಲಿ ಮಾಂಸಾಹಾರ ಸೇವಿಸಬಾರದು ಎಂದು ತಂತ್ರಿ ಸೂಚಿಸಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ ಚರ್ಚಿಸಿ ಕ್ರಮಗಳ ಬಗ್ಗೆ ತೀರ್ಮಾನಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ವೇಳೆ ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ಸೂಚಿಸಿದೆ. ಶ್ರೀ ಪದ್ಮನಾಭಸ್ವಾಮಿ ದೇಗುಲದ ಕಚೇರಿಯಲ್ಲಿ ಮಾಂಸಾಹಾರ ಸೇವಿಸಿದ ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಐಕ್ಯವೇದಿ ಆಗ್ರಹಿಸಿದೆ.