HEALTH TIPS

ಹೊಸಂಗಡಿ ಸುರಕ್ಷಾದಲ್ಲಿ ಸಸಿಗಳ ವಿತರಣೆ

            ಮಂಜೇಶ್ವರ: ಹೊಸಂಗಡಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ 27ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ಜರಗಿತು. ಈ ಸಂದರ್ಭದಲ್ಲಿ ಸುಮಾರು 50 ಮಂದಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.  

            ವಿದ್ಯಾಧರ ಅವರಿಗೆ ನೆಲ್ಲಿಕಾಯಿ ಮತ್ತು ಹಲಸಿನ ಹಣ್ಣಿನ ಗಿಡವನ್ನು ಡಾ.ಮುರಲೀ ಮೋಹನ್ ಚೂಂತಾರು ಅವರು ವಿತರಿಸುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಡಾ.ರಾಜಶ್ರೀ ಮೋಹನ್, ದಂತ ಸಹಾಯಕಿಯರಾದ ರಮ್ಯಾ, ಚೈತ್ರಾ , ಸುಷ್ಮಿತಾ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. 

            ಕಳೆದ 10 ವರ್ಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯವು ನಿರಂತರವಾಗಿ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಜೂನ್ ಮತ್ತು ಜುಲೈ  ತಿಂಗಳಿಡೀ ಆಚರಿಸುತ್ತಾ ಬಂದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries