HEALTH TIPS

ಸಿಯುಇಟಿ-ಯುಜಿ: ಅಂತಿಮ 'ಕೀ-ಉತ್ತರ' ಪ್ರಕಟ

            ವದೆಹಲಿ: ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ 'ಸಿಯುಇಟಿ- ಯುಜಿ' ಪರೀಕ್ಷೆಯ ಅಂತಿಮ 'ಕೀ-ಉತ್ತರ'ಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಗುರುವಾರ ಪ್ರಕಟಿಸಿದ್ದು, ಶೀಘ್ರದಲ್ಲಿಯೇ ಫಲಿತಾಂಶವನ್ನು ಪ್ರಕಟಿಸುವುದಾಗಿ ಹೇಳಿದೆ.

            ಎನ್‌ಟಿಎ ಜುಲೈ 7ರಂದು ತಾತ್ಕಾಲಿಕ 'ಕೀ ಉತ್ತರ'ಗಳನ್ನು ಪ್ರಕಟಿಸಿತ್ತು. ವೇಳಾಪಟ್ಟಿಯ ಪ್ರಕಾರ ಜೂನ್‌ 30ರಂದೇ ಸಿಯುಇಟಿ ಫಲಿತಾಂಶವನ್ನು ಎನ್‌ಟಿಎ ಪ್ರಕಟಿಸಬೇಕಿತ್ತು. ಆದರೆ 'ನೀಟ್‌-ಯುಜಿ', 'ಯುಜಿಸಿ-ನೆಟ್‌', 'ಸಿಎಸ್‌ಐಆರ್‌-ಯುಜಿಸಿ-ನೆಟ್‌' ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸೋರಿಕೆ ಆರೋಪಗಳು ವ್ಯಕ್ತವಾದ ಕಾರಣ ಫಲಿತಾಂಶ ಪ್ರಕಟಣೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

                63 ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಪರೀಕ್ಷೆಗೆ ದೇಶದಾದ್ಯಂತ 13.4 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದರು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವವರು ದೇಶದ ಒಟ್ಟು 261 ಕೇಂದ್ರ, ರಾಜ್ಯ, ಡೀಮ್ಡ್‌ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries