ಕಾಸರಗೋಡು: ಲಾಕ್‌ಡೌನ್ ಸಂದರ್ಭದಲ್ಲಿ ಕೋವಿಡ್‌ನಿಂದ ಸಾವಿಗೀಡಾದ ರೋಗಿಗಳ ಅಂತ್ಯಸ0ಸ್ಕಾರಕ್ಕೆ ಆರೋಗ್ಯ ಕಾರ್ಯಕರ್ತರೊಂದಿಗೆ ಸೇವಾ ಭಾರತಿ ಕಾರ್ಯಕರ್ತರು ನಿರ್ಭೀತಿಯಿಂದ ಸೇವೆ ಸಲ್ಲಿಸುವ ಮೂಲಕ ಶ್ಲಾಘನೀಯ ಕಾರ್ಯ ನಡೆಸಿರುವುದಾಗಿ ಖ್ಯಾತ ಮಕ್ಕಳ ತಜ್ಞ ಡಾ.ಬಿ.ನಾರಾಯಣ ನಾಯ್ಕ್ ತಿಳಿಸಿದ್ದಾರೆ. ಅವರು ಅಣಂಗೂರಿನ ಶಾರದಾಂಬಾ ಸಭಾ ಭವನದಲ್ಲಿ ನಡೆದ ಸೇವಾ ಭಾರತಿ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಜನತೆಗೆ ಸೇವೆ ಎಲ್ಲಿ, ಯಾವಾಗ ಬೇಕಾದರೂ ಸೇವಾ ಭಾರತಿ ನೀಡಲು ಸದಾ ತಯಾರಾಗಿರುವ ಸಂಘಟನೆಯಾಗಿದ್ದು, ವೃದ್ಧಾಶ್ರಮ, ಮಕ್ಕಳ ಮನೆ, ಉಚಿತ ಆಹಾರ ವಿತರಣೆ, ವಸತಿ ನಿರ್ಮಾಣದಂತಹ ಸೇವಾ ಕಾರ್ಯಗಳ ಮೂಲಕ ಜನರ ಮನಮುಟ್ಟುವಲ್ಲಿ ಸಂಘಟನೆ ಯಶಸ್ವಿಯಾಗಿದೆ ಎಂದು ತಿಳಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಸಿ.ಕೆ.ವೇಣುಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ವೆಂಕಟರಮಣ ಹೊಳ್ಳ, ಆರ್.ಎಸ್.ಎಸ್‌ಉತ್ತರ ವಲಯ ಕಾರ್ಯವಾಹ ಪಿ.ಎನ್.ಈಶ್ವರನ್, ಕಣ್ಣೂರು ವಿಭಾಗದ ಸೇವಾ ಪ್ರಮುಖ್ ಕೆ.ಪ್ರಮೋದ್, ಸೇವಾಭಾರತಿ ರಾಜ್ಯ ಕಾರ್ಯದರ್ಶಿ ಎಂ.ರಾಜೀವನ್, ಎಂ.ಕೆ. ಸಂಗೀತ ವಿಜಯನ್ ಮತ್ತು ಎಂ.ಟಿ.ದಿನೇಶ್ ಉಪಸ್ಥಿತರಿದ್ದರು.
ಈ ಸಂದರ್ಭ೨೦೨೪-೨೦೨೫ ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಿ.ಕೆ.ವೇಣುಗೋಪಾಲ್ ರಕ್ಷಾಧಿಕಾರಿ, ಎಂ.ಟಿ.ದಿನೇಶ್ ಅಧ್ಯಕ್ಷ, ಕೆ.ಬಾಲಕೃಷ್ಣನ್, ಟಿ.ವಿ.ಅಶೋಕ್ ಕುಮಾರ್, ಸತೀಶ್ ಕಮ್ಮತ್ ಉಪಾಧ್ಯಕ್ಷರು, ಎ. ಕೆ.ಸಂಗೀತಾ ವಿಜಯ್ ಪ್ರಧಾನ ಕಾರ್ಯದರ್ಶಿ, ಕೆ.ರಾಧಾಕೃಷ್ಣನ್, ಪ್ರತೀಕ್ ಆಳ್ವ, ಕೆ.ವಿ.ಲಕ್ಷ್ಮಣನ್, ಪಿ.ಬಿ.ಪ್ರೀತಾ ಉನ್ನಿಕಾರ್ಯದರ್ಶಿಗಳು, ಸಿ.ಎ. ಯೆದಿನ್ ಕೋಶಾಧಿಕಾರಿ, ಕೆ.ಕೃಷ್ಣನ್ ಕುಟ್ಟಿ ಜತೆ ಕೋಶಾಧಿಕಾರಿ, ಜಿ.ಅರ್ಜುನ್ ಮಾಧ್ಯಮ ಸಂಯೋಜಕ, ಕೆ. ಅಜಯ್ ಕಮ್ಮತ್ ಸಹ ಮಾಧ್ಯಮ ಸಂಯೋಜಕ, ಹಾಗೂ ಕೆ.ವಿ.ಉನ್ನಿಕೃಷ್ಣನ್ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.