ತಿರುವನಂತಪುರ: ಕೇರಳದ ಆಡಳಿತ ಕೇಂದ್ರದಲ್ಲಿ ಎರಡು ದಿನಗಳಿಂದ ಚಟುವಟಿಕೆಗಳು ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಸೆಕ್ರೆಟರಿಯೇಟ್‌ನಲ್ಲಿ ಇ-ಕಚೇರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಒಂದೂವರೆ ತಿಂಗಳ ಹಿಂದೆಯೇ ಸೆಕ್ರೆಟರಿಯೇಟ್‌ನಲ್ಲಿ ಇ-ಫೈಲಿಂಗ್ ವ್ಯವಸ್ಥೆ ಮರುಸಂಘಟನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.
ಬಳಿಕ ಅಧಿಕಾರಿಗಳು ಕಡತ ತೆಗೆಯುವುದು ನಿಧಾನವಾಗುತ್ತಿದೆ ಎಂದು ದೂರಿದರು. ಹೀಗಿರುವಾಗ ಮಂಗಳವಾರ ಬೆಳಗ್ಗೆಯಿಂದ ಇ-ಕಚೇರಿ ಸಂಪೂರ್ಣ ಹಾನಿಗೊಂಡಿತು. ಇ-ಪೈಲ್ ತೆರೆಯಲೂ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಎರಡು ದಿನಗಳ ಸ್ಥಗಿತದ ಕಾರಣ ಅಧಿಕಾರಿಗಳು ಇದೀಗ ಕೆಲಸವಿಲ್ಲದೆ ಪರದಾಡುವಂತಾಗಿದೆ. ಸೆಕ್ರೆಟರಿಯೇಟ್ ಸ್ಟಾಫ್ ಕೋ-ಆಪರೇಟಿವ್ ಸೊಸೈಟಿಯ ಚುನಾವಣೆ ಶನಿವಾರ ನಡೆಯಲಿದೆ. ಕಡತ ವರ್ಗಾವಣೆ ಸ್ಥಗಿತಗೊಂಡಿರುವುದರಿAದ ಸಂಘಟನಾ ಕಾರ ್ಯಕರ್ತರಾದ ಅಧಿಕಾರಿಗಳೆಲ್ಲ ಇಲಾಖೆಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇ-ಫೈಲಿಂಗ್ ಅನ್ನು ಕಾರ್ಯಗತಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸಮಸ್ಯೆ ಬಗ್ಗೆ ತಿಳಿಸಲಾಗಿದೆ. ಆದರೆ ಇನ್ನೂ ಸಮಸ್ಯೆಯನ್ನು ಪರಿಹರಿಸಿಲ್ಲ.
ಮುಂದಿನ ಸೋಮವಾರ ಸಂಜೆಯೊಳಗೆ ಸಮಸ್ಯೆ ಬಗೆಹರಿಯುವ ಭರವಸೆ ಇತ್ತು. ಆದರೆ ಎರಡು ದಿನ ಕಳೆದರೂ ಸಮಸ್ಯೆ ಏನೆಂಬುದನ್ನು ಪತ್ತೆ ಹಚ್ಚಲು ಎನ್ ಐಸಿಗೆ ಸಾಧ್ಯವಾಗಿಲ್ಲ. ಐಟಿ ಕಾರ್ಯದರ್ಶಿ ಕರೆದ ಸಭೆಯಲ್ಲಿ ಎನ್‌ಐಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಸಂಪೂರ್ಣ ವ್ಯವಸ್ಥೆ ಈ-ಪೈಲ್ ನಲ್ಲಿ ಇರುವುದರಿಂದ, ತುರ್ತು ಫೈಲ್ ಗಳನ್ನು ಮುದ್ರಿಸಲು ಸಾಧ್ಯವಾಗುತ್ತಿಲ್ಲ. ದೆಹಲಿಯಿಂದ ಎನ್ ಐಸಿ ತಜ್ಞರು ಬಂದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಿದೆ ಐಟಿ ಇಲಾಖೆ.