HEALTH TIPS

ಶೇಣಿ ಶಾಲಾ ಹೈಸ್ಕೂಲ್ ವಿಭಾಗಕ್ಕೆ ನೀರು ಶುದ್ಧೀಕರಣ ಯಂತ್ರ ವಿತರಣೆ

            ಪೆರ್ಲ: ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗಕ್ಕೆ ಹಿರಿಯ ಅಧ್ಯಾಪಕಿ ವೀಣಾ ಅವರು ನೀರು ಶುದ್ಧೀಕರಣ ಯಂತ್ರವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾರದಾ ವೈ ಅವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ  ಶ್ರೀಶಕುಮಾರ್ ಎಂ.ಪಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿ'ಸೋಜ, ಶಿಕ್ಷಕ ವೃಂದ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ನೀರು ಶುದ್ಧೀಕರಣ ಯಂತ್ರವನ್ನು ಕೊಡುಗೆಯಾಗಿ ನೀಡಿದ  ವೀಣಾ ಟೀಚರ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಸಜಿತ ಸ್ವಾಗತಿಸಿ,ಮೊಹಮ್ಮದ್ ವಂದಿಸಿದರು. ದಿವ್ಯಾ  ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries