ತಿರುವನಂತಪುರ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವಿಶೇಷ ಪೋಲೀಸ್ ಅಧಿಕಾರಿಗಳಿಗೆ ತಕ್ಷಣದ ಹಣ ಪಾವತಿಗೆ ಹಣ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 6 ಕೋಟಿ 32 ಲಕ್ಷ ಮಂಜೂರಾಗಿದೆ.
ಪೋಲೀಸ್ ನಿಧಿಯಿಂದ ಹಣ ಮಂಜೂರು ಮಾಡಲಾಗಿದೆ. ಚುನಾವಣೆಗಾಗಿ 25000 ಕ್ಕೂ ಹೆಚ್ಚು ಎಸ್‍ಪಿಒಗಳನ್ನು ನೇಮಿಸಲಾಗಿತ್ತು. ಅವರ ದಿನ ವೇತನ 1300 ರೂ.ಗಳಂತೆ ವಿತರಿಸಲಾಗುತ್ತದೆ. ಎರಡು ದಿನ ಡ್ಯೂಟಿ ಮಾಡಿದರೂ ಸಿಗಬೇಕಿದ್ದ 2600 ರೂಪಾಯಿ ಈ ವರತೆಗೆ ವಿತರಿಸಿರಲಿಲ್ಲ. ಉನ್ನತ ಪೋಲೀಸ್ ಅಧಿಕಾರಿಗಳ ವೈಫಲ್ಯವೇ ಸಮಸ್ಯೆಗೆ ಕಾರಣ.
ಚುನಾವಣಾ ಆಯೋಗದ ಅನುಮತಿ ಪಡೆಯದೇ ವಿಶೇಷ ಪೋಲೀಸ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಪೋಲೀಸರೂ ಆಯೋಗದ ಸೂಚನೆ ಪಾಲಿಸಿಲ್ಲ. ಇದರ ಬೆನ್ನಲ್ಲೇ ಚುನಾವಣಾ ಆಯೋUದಿಂದ ವೇತನ ನೀಡುವಂತಿಲ್ಲ ಎಂಬ ನಿಲುವು ತಳೆದಿದೆ. ಇದರಿಂದ ಪಾವತಿ ವಿತರಣೆ ಬಿಕ್ಕಟ್ಟಾಯಿತು. ಬಳಿಕ ಚುನಾವಣಾ ಆಯೋಗ 36 ಲಕ್ಷ ರೂ.ಕೊನೆಗೂ ನೀಡಿತು.
ಆದರೆ ಪರಿಹಾರವಾಗಿ ನೀಡಬೇಕಾದ ಒಟ್ಟು ಮೊತ್ತ ಆರೂವರೆ ಕೋಟಿ ರೂಪಾಯಿಗೂ ಹೆಚ್ಚು. ವಿದ್ಯಾರ್ಥಿ ಪೋಲೀಸ್ ಕೆಡೆಟ್ ಮತ್ತು ಎನ್‍ಸಿಸಿ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳು ಎಸ್‍ಪಿಒಗಳಾಗಿ ಕರ್ತವ್ಯದಲ್ಲಿದ್ದರು. ಹಣ ಮಂಜೂರು ಮಾಡಿದ ನಂತರ ಕರ್ತವ್ಯದಲ್ಲಿದ್ದವರಿಗೆ ತಲಾ 2600 ರೂ.ಲಭಿಸಲಿದೆ.
ಅಧಿಕಾರಿಗಳ ವೈಫಲ್ಯದಿಂದ ಪೋಲೀಸ್ ನಿಧಿಯಿಂದ ಆರು ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಹಿಂದಿನ ವರ್ಷಗಳಲ್ಲಿ ಚುನಾವಣೆ ಮುಗಿದ ತಕ್ಷಣ ಬೂತ್ ಗಳಿಗೆ ವಿತರಿಸಿದ ಹಣ ಚುನಾವಣೆ ಮುಗಿದು ಒಂದೂವರೆ ತಿಂಗಳು ಕಳೆದರೂ ಬಂದಿರಲಿಲ್ಲ.
ಸ್ಟೂಡೆಂಟ್ ಪೋಲೀಸ್ ಕೆಡೆಟ್, ಎನ್‍ಸಿಸಿ, ಎನ್‍ಎಸ್‍ಎಸ್ ಮತ್ತು ನಿವೃತ್ತ ಸೈನಿಕರಿಗೆ ಸೇರಿದ ವಿದ್ಯಾರ್ಥಿಗಳು ಈ ಬಾರಿಯ ಚುನಾವಣೆಗೆ ವಿಶೇಷ ಪೆÇಲೀಸ್ ಅಧಿಕಾರಿಗಳಾಗಿ ಕೆಲಸ ಮಾಡಿದ್ದರು.