ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ದಿನಾಂಕ ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲ್ಲಿ ಔಷಧೀಯ ಗಿಡಮೂಲಿಕೆಗಳಿಂದ ಹಾಗೂ ಪರಿಸರದಲ್ಲಿ ದೊರಕುವ ಗಿಡ, ಎಲೆ, ಹೂ ಇತ್ಯಾದಿಗಳನ್ನು ಬಳಸಿ ತಯಾರಿಸಿದ ಕರ್ಕಾಟಕ ಮಾಸದ ಔಷಧೀಯ ಗಂಜಿ ವಿತರಣೆ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ಕರ್ನಾಟಕ ಆರ್ಯುವೇದ ಕಾಲೇಜಿನ ಪ್ರಾಂಶುಪಾಲ ಡಾ. ರವಿರಾವ್, ಮತ್ತು ಮಲಪ್ಪುರಂ ಗಂಗಾಧರನ್ ಉಣ್ಣಿ ವೈದ್ಯರ್ ರವರುಗಳು ಕರ್ಕಾಟಕ ಮಾಸದ ಔಷಧಿ ಗಂಜಿಯ ಮಹತ್ವದ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ, ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿ, ಔಷÀಧ ಗಂಜಿಯನ್ನು ಸೇವಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶರೀರ ಸ್ವಾಸ್ಥö್ಯ ಕಾಪಾಡಿಕೊಳ್ಳುವ ತುರ್ತು ಇಂದು ಹೆಚಿದೆ. ಪಾರಂಪರಿಕ ರೀತಿಯ ಆಹಾರ, ಜೀವನ ನಮ್ಮ ನಿತ್ಯ ಜೀವನದ ಭಾಗವಾಗಲಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಳೆದ ೧೫ ವರ್ಷಗಳಿಂದ ನೂರಾರು ವಿಷಬಾಧಿತರಿಗೆ ಚಿಕಿತ್ಸೆ ನೀಡಿ, ತಮ್ಮ ವಂಶವಾಹಿಯಾಗಿ ಬಂದ ವಿಷÀಚಿಕಿತ್ಸೆಯ ಮೂಲಕ ಜನಮನ್ನಣೆಗಳಿಸಿದ ಕಿನ್ನಿಂಗಾರು ಸಸಿಹಿತ್ಲುವಿನ ನಾಟಿ ವೈದ್ಯೆ ಶ್ಯಾಮಲಾ ರೈ ಇವರಿಗೆ ಶ್ರೀಗಳು ಗಣ್ಯರ ಸಮ್ಮುಖದಲ್ಲಿ ಆಯುಶ್ರೀ-೨೦೨೪” ಪುರಸ್ಕಾರ ನೀಡಿ ಆರ್ಶೀವದಿಸಿದರು.
ಶ್ರೀ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ ಜೆ ಜಯದೇವನ್ ಕಣ್ಣೂರ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ತಹಶೀಲ್ದಾರ್ ಶಿಬು, ಚಂದ್ರಶೇಖರ್ ಬೆಂಗಳೂರು, ಮಂಗಳೂರಿನ ಸುಲೋಚನ ಭಟ್, ಉದ್ಯಮಿ ಶ್ರೀಧರ್ ಶೆಟ್ಟಿ ಮುಟ್ಟಂ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಣ್ಣೂರಿನ ಖ್ಯಾತ ನಾಟಿ ವೈದ್ಯ ಪವಿತ್ರನ್ ಗುರುಕ್ಕಳ್ ಮತ್ತು ಹಲಸಿನ ವಿವಿಧ ತಳಿಗಳ ಬಗ್ಗೆ ಸಂಶೋದನೆ ನಡೆಸಿದ ಶೀಬಾ ಸತೀಶ್ ಕಣ್ಣೂರು ಅವರನ್ನೂ ಗೌರವಿಸಿ ಅಭಿನಂದಿಸಲಾಯಿತು. ಸುಮಂಗಲ ಮಂಗಳೂರು ಪ್ರಾರ್ಥನೆಗೈದರು. ಗಂಗಾಧರ್ ಕೊಂಡೆವೂರು ಸ್ವಾಗತಿಸಿ, ದಿನಕರ ಹೊಸಂಗಡಿ ನಿರೂಪಿಸಿ ವಂದಿಸಿದರು.
ವಿವಿಧ ಭಾಗಗಳಿಂದ ಆಗಮಿಸಿದ ನಾಟಿ ವೈದ್ಯರುಗಳು ಪರಿಸರದ ಗಿಡ, ಎಲೆ, ಹೂಗಳನ್ನು ಮತ್ತು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಖಾದ್ಯವಸ್ತುಗಳಿಂದ ಕೂಡಿದ ಔಷಧೀಯ ಗಂಜಿಯನ್ನು ೧೦೦೦ ಕ್ಕೂ ಹೆಚ್ಚು ಜನರು ಸವಿದು ಸಂತಸ ಪಟ್ಟರು.