ತಿರುವನಂತಪುರ: ದೇವಸ್ಥಾನಕ್ಕೆ ನುಗ್ಗಿ ಅರ್ಚಕನನ್ನು ಬಂಧಿಸಿದ ಪೋಲೀಸರ ಕ್ರಮವನ್ನು ವಿರೋಧಿಸಿ ಹಿಂದೂ ಐಕ್ಯವೇದಿ ಮತ್ತು ಬಿಜೆಪಿ ಪ್ರತಿಭಟನೆ ನಡೆಸಿವೆ.
ಕುರಿಯಾತಿ ಜಂಕ್ಷನ್ ನಲ್ಲಿ ಪ್ರತಿಭಟನೆಯ ಅಂಗವಾಗಿ ಧರಣಿ ನಡೆಸಲಾಯಿತು. ತಾಯಂದಿರು ಸೇರಿದಂತೆ ಹಲವರು ಭಾಗವಹಿಸಿದ್ದರು.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಅರ್ಚಕನನ್ನು ಬಂಧಿಸಿ ಹಿಂದೂ ಸಮಾಜ ಹಾಗೂ ಅರ್ಚಕರನ್ನು ಅವಮಾನಿಸಿದ ಪೋಲೀಸರು ದೇವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು ಒತ್ತಾಯಿಸಿದರು. ಪೋಲೀಸರು ಕ್ಷಮೆ ಕೇಳಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ವ್ಯಕ್ತಿಯ ಬಂಧನಕ್ಕೆ ಸಂಬ0ಧಿಸಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದನ್ನು ಉಲ್ಲಂಘಿಸಿ ಪೋಲೀಸರು ಅರ್ಚಕನನ್ನು ದೇವಸ್ಥಾನದಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಬೆಟ್ಟು ಮಾಡಿದೆ. ಮರುದಿನ ಬೆಳಗ್ಗೆ ಹತ್ತು ಗಂಟೆಗೆ ಶಂಖುಮುಖ ಎಸಿ ಮುಂದೆ ಹಾಜರಾಗುವುದಾಗಿ ಹೇಳಿದ್ದರೂ ದೇವಾಲಯಕ್ಕೆ ನುಗ್ಗಿ ಬಂಧಿಸಿರುವ ಕ್ರಮ ಕೇರಳದಲ್ಲಿ ಈವರೆಗೆ ನಡೆದಿಲ್ಲ ಎಂದು ಮುಖಂಡರು ತಿಳಿಸಿದರು.
ಇದಕ್ಕೆ ಬಂಧಿಸಿದ ಪೋಲೀಸ್ ಅಧಿಕಾರಿಯ ಅಜಾಗರೂಕತೆಗಿಂತ ಬೇರೆ ಆಯಾಮಗಳಿದ್ದು, ವಿಶ್ವ ಹಿಂದೂ ಪರಿಷತ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೊಂದು ಪ್ರತ್ಯೇಕ ಘಟನೆಯಲ್ಲ ಎಂದು ಮುಖಂಡರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ತಿರುಮಲ ವಾರ್ಡ್ ಕೌನ್ಸಿಲರ್ ತಿರುಮಲ ಅನಿಲ್, ಕುರ್ಯಾತಿ ವಾರ್ಡ್ ಕೌನ್ಸಿಲರ್ ಮೋಹನನ್ ನಾಯರ್, ಮಣಕ್ಕಾಡ್ ವಾರ್ಡ್ ಕೌನ್ಸಿಲರ್ ಸುರೇಶ್, ಹಿಂದೂ ಐಕ್ಯವೇದಿ ಮುಖಂಡ ಸಂದೀಪ್ ತಂಬಾನೂರ್, ದೇವಸ್ಥಾನ ಸಂರಕ್ಷಣಾ ಸಮಿತಿ ಮುಖಂಡ ಶಾಜು ಶ್ರೀಕಂಡೇಶ್ವರA, ಆಟುಕಲ್ ಕುರ್ಯಾತಿ ಅಮ್ಮನಕೋವಿಲ್ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಂದಕುಮಾರ್ ಇತರರು ಮಾತನಾಡಿದರು.