ಕಾಸರಗೋಡು: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ಬಿರುಸಿನ ಮಳೆ ಶನಿವಾರ ಹಗಲುಹೊತ್ತಲ್ಲಿ ಅಲ್ಪ ಕಡಿಮೆಯಾಗಿತ್ತು. ಜು. 21ರಂದು ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬಿರುಸಿನ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ 154ಮನೆಗಳು ಪೂರ್ಣವಾಗಿ ಹಾಗೂ 10ಮನೆಗಳು ಆಂಶಿಕವಾಗಿ ಹಾನಿಗೀಡಗಿದೆ. ಜಿಲ್ಲೆಯ ಬಹುತೇಕ ಹೊಳೆಗಳು ತುಂಬಿ ಹರಿಯುತ್ತಿದ್ದು, ಶನಿವಾರ ಮಳೆ ಬಿರುಸು ಕಳೆದುಕೊಂಡ ಹಿನ್ನೆಲೆಯಲ್ಲಿ ನೀರಿನ ಮಟ್ಟ ಅಲ್ಪ ತಗ್ಗಿದೆ.