ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು 2022 ಹಾಗೂ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿಯನ್ನು ಸ್ವತಃ ಅಭ್ಯರ್ಥಿಗಳೇ ಸಲ್ಲಿಸಬಹುದು ಅಥವಾ ಇತರರು ಶಿಫಾರಸು ಮಾಡಿ ಅರ್ಜಿ ಸಲ್ಲಿಸಬಹುದು.
ತುಳು ಸಾಹಿತ್ಯ - ಸಂಶೋಧನೆ, ತುಳು ಜಾನಪದ ಕ್ಷೇತ್ರ , ತುಳು ಯಕ್ಷಗಾನ ಕ್ಷೇತ್ರ, ತುಳು ಸಿನಿಮಾ - ನಾಟಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು ಪರಿಗಣಿಸಿ 2 ವಾರ್ಷಿಕ ಸಾಲಿನಲ್ಲಿ 6 ಮಂದಿಯನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.
*2022 ಮತ್ತು 2023 ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಲೇಖಕರು ಅಥವಾ ಪ್ರಕಾಶಕರು ಅರ್ಜಿ ಸಲ್ಲಿಸಬ ಹುದಾಗಿದೆ. 2022ರ ಜನವರಿ 1ರಿಂದ 2023ರ ಡಿಸೆಂಬರ್ 31ರ ಅವಧಿಯಲ್ಲಿ ಪ್ರಕಟಗೊಂಡ 2 ವರ್ಷಗಳ ಪ್ರತ್ಯೇಕ ಸಾಲಿನ ಪುಸ್ತ್ತಕಗಳನ್ನು ಪುಸ್ತಕ ಬಹುಮಾನಕ್ಕೆ ಪರಿಗಣಿಸಲಾಗುವುದು. ತುಳು ಕವನ ಸಂಕಲನ, ತುಳು ಕಥಾ ಸಂಕಲನ, ತುಳು ಕಾದಂಬರಿ, ತುಳು ಕಾವ್ಯ, ತುಳು ನಾಟಕ, ತುಳುವಿನ ಬಗ್ಗೆ ಅಧ್ಯಯನ ಗ್ರಂಥ ಹಾಗೂ ತುಳುವಿನಿಂದ ಇತರ ಭಾಷೆಗೆ - ಇತರ ಭಾಷೆಯಿಂದ ತುಳುವಿಗೆ ಭಾಷಾಂತರಿತ ಕೃತಿಗಳನ್ನು ಬಹುಮಾನಕ್ಕೆ ಆಹ್ವಾನಿಸಲಾಗಿದೆ.
ಈ ಪ್ರಕಾರಗಳಲ್ಲಿ ಅಕಾಡಮಿಯು ಹೆಚ್ಚು ಸಂಖ್ಯೆಯಲ್ಲಿ ಸ್ವೀಕರಿಸುವ ಪುಸ್ತಕಗಳ 3 ಪ್ರಕಾರಗಳನ್ನು ಮಾತ್ರ ಪುಸ್ತಕ ಬಹು ಮಾನಕ್ಕೆ ಪರಿಗಣಿಸಲಾಗುವುದು. ಪುಸ್ತಕಗಳ ತಲಾ 4 ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ತುಳು ಅಕಾಡಮಿ ಗೌರವ ಪ್ರಶಸ್ತಿ 2022 ಮತ್ತು 2023 ಹಾಗೂ ಪುಸ್ತಕ ಬಹು ಮಾನಕ್ಕೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ತುಳು ಅಕಾಡಮಿ ಪುಸ್ತಕ ಬಹುಮಾನ ಯೋಜನೆ 2022 ಮತ್ತು 2023 ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳುಭವನ, ಅಂಚೆ: ಅಶೋಕನಗರ, ಉರ್ವಸ್ಟೋರ್, ಮಂಗಳೂರು - 575 006 ಈ ವಿಳಾಸಕ್ಕೆ ಜು.15ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.