HEALTH TIPS

'ರೈಸ್ ಅಂಡ್ ಥ್ರೈವ್' ವನಿತಾ ಲೀಗ್ ಅಭಿಯಾನಕ್ಕೆ ಚಾಲನೆ


               ಕಾಸರಗೋಡು: ಆಧುನಿಕ ಜಗತ್ತಿನಲ್ಲಿ ರಾಷ್ಟ್ರ ನಿರ್ಮಾಣಕ್ಕಾಗಿ ಮಹಿಳಾ ಸಬಲೀಕರಣ ಅತ್ಯಗತ್ಯ ಎಂದು ಮುಸ್ಲಿಂ ಲೀಗ್ ಕಾಸರಗೋಡು ಮಂಡಲ ಅಧ್ಯಕ್ಷ ಮಾಹಿನ್ ಕೇಳೋಟ್ ತಿಳಿಸಿದ್ದಾರೆ. ಅವರು ಮುಸ್ಲಿಂಲೀಗ್ ಮಹಿಳಾ ಘಟಕ ಕಾಸರಗೋಡು ಮಂಡಲ ಸಮಿತಿ ಆಯೋಜಿಸಿದ್ದ 'ರೈಸ್ ಅಂಡ್ ಥ್ರೈವ್' ವನಿತಾ ಲೀಗ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.  

                ಕುಟುಂಬಶ್ರೀ, ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆ, ನೆರೆಕರೆ ಕೂಟಗಳ ಮೂಲಕ ಬಡತನ ನಿರ್ಮೂಲನೆಯ ಮಹತ್ವದ ಯೋಜನೆಗಳಲ್ಲಿ ಪ್ರೇರಕ ಶಕ್ತಿಯಾಗಿ ಮಹಿಳೆಯರು ಹೊರಹೊಮ್ಮಿರುವುದಾಗಿ ತಿಳಿಸಿದರು.

              ಸಂಘಟನೆ ಅಧ್ಯಕ್ಷೆ ಶಕೀಲಾ ಮಜೀದ್ ಅಧ್ಯಕ್ಷತೆ ವಹಿಸಿದ್ದರು.  ಮುಸ್ಲಿಂ ಲೀಗ್ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಟಿ.ಎಂ.ಇಕ್ಬಾಲ್, ಮಹಿಳಾ ಲೀಗ್ ಜಿಲ್ಲಾಧ್ಯಕ್ಷೆ ಮುಮ್ತಾಜ್ ಸೇಮಿರಾ, ನಜ್ಮಾ ಖಾದರ್, ನೂರ್ ಜಹಾನ್, ಸಫೀರಾ ಮಧೂರು, ಸೌದಾ ಇಬ್ರಾಹಿಂ, ನಜೀರಾ ಇಸ್ಮಾಯಿಲ್, ಸಾಜಿದಾ ಹನೀಫ್, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ ಬಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಾಸ್ಮಿನ್ ಕಬೀರ್ ಚೆರ್ಕಳಂ, ನೈಮುನ್ನೀಸಾ ಎಂ, ಫರ್ಶಾನಾ ಶಿಹಾಬುದ್ದೀನ್, ರಶೀದಾ ತಸ್ನಿ, ಸಮೀರ ಅಬ್ದುಲ್ ರಜಾಕ್, ಅಸ್ಮಾ ಮುಹಮ್ಮದ್, ಸುಹ್ರಾ, ಹಸೀನಾ ಪಟ್ಲ, ಸೈಬುನ್ನೀಸಾ, ಜಮೀಲಾ ಮಾಹಿನ್, ಅಸ್ಮಾ ಖಲೀಲ್, ಹಾಜಿರಾ, ಅಫೀಲಾ ಬಶೀರ್, ಸಫಿಯಾ ಮೊಯ್ಧೀನ್, ಆಯೇಷತ್ ಮರ್ಲಿಯಾ, ಕದೀಜಾ, ಜುಲೈಕಾ, ಸುಮಯ್ಯ ಮೊಯ್ದೀನ್, ಫಾತಿಮತ್ ಸಮೀನಾ, ಜುಬೈದಾ  ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಜಾಹಿರಾ ಮಜೀದ್ ಸ್ವಾಗತಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries