HEALTH TIPS

ನಿಯಮಿತ ಕಂಪ್ಯೂಟರ್ ಬಳಕೆದಾರರೇ ಈ ಟಿಪ್ಸ್ ನಿಮಗಾಗಿ

 ಇಂದಿನ ದಿನಗಳಲ್ಲಿ ಕಂಪ್ಯೂಟರ್ ಅನ್ನು ಬಳಸದವರು ಯಾರಿದ್ದಾರೆ ಹೇಳಿ. ಕಚೇರಿಯಲ್ಲಿ, ನಿವಾಸದಲ್ಲಿ ಹೀಗೆ ಪ್ರತಿಯೊಂದೆಡೆಯಲ್ಲೂ ಕಂಪ್ಯೂಟರ್ ಅತ್ಯಗತ್ಯ ಎಂದೆನಿಸಿದೆ. ನಿಯಮಿತವಾಗಿ ಕಂಪ್ಯೂಟರ್ ಅನ್ನು ಬಳಸುವುದು ಕಣ್ಣಿಗೆ ಅಪಾಯವನ್ನು ತಂದೊಡ್ಡಲಿದೆ ಮತ್ತು ಕೆಲವೊಂದು ದೈಹಿಕ ನ್ಯೂನತೆಗಳನ್ನು ನಿಮ್ಮಲ್ಲಿ ಉಂಟುಮಾಡಲಿದೆ.

ಹಾಗಿದ್ದರೆ ನಿಮ್ಮ ಈ ಸಮಸ್ಯೆಯನ್ನು ದೂರಮಾಡಲೆಂದೇ ಇಂದಿನ ಲೇಖನದಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನಾವು ನೀಡುತ್ತಿದ್ದು ಇದನ್ನು ಬಳಸಿಕೊಂಡು ಕಂಪ್ಯೂಟರ್ ಬಳಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಮಗೆ ಮಾಡಬಹುದಾಗಿದೆ.

ಬ್ರೇಕ್ ತೆಗೆದುಕೊಳ್ಳಿ ಹೆಚ್ಚಿನ ಸಮಯಗಳವರೆಗೆ ಪರದೆಯ ಎದುರು ನೀವು ಕುಳಿತುಕೊಳ್ಳಬೇಕು ಎಂದಾದಲ್ಲಿ, ನಡುವೆ ವಿರಾಮವನ್ನು ತೆಗೆದುಕೊಳ್ಳಿ. ಇನ್ನು ಕೆಲಸ ಮಾಡುವಾಗ ಆಂಟಿ ಗ್ಲೇರ್‌ಗಳನ್ನು ಬಳಸಿ. ಇದು ನಿಮ್ಮ ಕಣ್ಣುಗಳನ್ನು ಕಂಪ್ಯೂಟರ್ ಪರದೆಗಳಿಂದ ರಕ್ಷಿಸುತ್ತದೆ.

ಕಣ್ಣಿನ ಮಟ್ಟವನ್ನು ಸಮಾನವಾಗಿ ಇರಿಸಿಕೊಳ್ಳಿ ನಿಮ್ಮ ಕಣ್ಣಿನ ನೇರಕ್ಕೆ ಕಂಪ್ಯೂಟರ್ ಸ್ಕ್ರೀನ್ ಅನ್ನು ಸಮಾನಾಂತರವಾಗಿ ಇರಿಸಿಕೊಳ್ಳಿ. ತುಂಬಾ ಕೆಳಗೆ ಅಥವಾ ಮೇಲಕ್ಕೆ ಪರದೆಯನ್ನು ದಿಟ್ಟಿಸಿ ನೋಡುವುದು ನಿಮ್ಮ ಕಣ್ಣುಗಳಿಗೆ ಆಯಾಸವನ್ನುಂಟು ಮಾಡಬಹುದು.

ಕಾಂಟ್ರಾಸ್ಟ್ ಫಾಂಟ್ ಬಣ್ಣ ಯಾವಾಗಲೂ ಗಾಢವಾಗಿರಲಿ ಮತ್ತು ಹಿನ್ನಲೆ ಮಂದವಾಗಿರಲಿ. ಆ ಬಣ್ಣಗಳಲ್ಲಿ ಪಠ್ಯಗಳನ್ನು ಓದುವುದು ಕಣ್ಣಿಗೆ ಆಯಾಸವನ್ನುಂಟು ಮಾಡುವುದಿಲ್ಲ.

ಬೆಳಕಿನ ಹೊಂದಿಸುವಿಕೆ ಅತಿ ಕಡಿಮೆ ಬೆಳಕು ಮತ್ತು ಅತಿ ಹೆಚ್ಚು ಬೆಳಕಿನಲ್ಲಿ ಎಂದಿಗೂ ಕಂಪ್ಯೂಟರ್‌ನಲ್ಲಿ ಕೆಲಸ ಮಾಡದಿರಿ.

ಕಂಪ್ಯೂಟರ್ ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿ ನಿಮ್ಮ ಕಂಪ್ಯೂಟರ್ ಸ್ಕ್ರೀನ್‌ನ ಬ್ರೈಟ್‌ನೆಸ್ ಅನ್ನು ಕಡಿಮೆ ಮಾಡಿ.

ವಾಲ್‌ಪೇಪರ್ ಹಸಿರಾಗಿರಲಿ ನಿಮ್ಮ ವಾಲ್‌ಪೇಪರ್ ಯಾವಾಗಲೂ ಹಸಿರಾಗಿರಲಿ. ಹೀಗೆ ಮಾಡುವುದರಿಂದ ಕಣ್ಣಿನ ಒತ್ತಡ ಕಡಿಮೆಯಾಗುತ್ತದೆ.

ಶಾರ್ಟ್‌ಕಟ್‌ಗಳನ್ನು ಬಳಸಿ ಮನುಷ್ಯರಿಗಿಂತಲೂ ವೇಗವಾಗಿ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸಬಲ್ಲುದು. ಆದಷ್ಟು ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಶಾರ್ಟ್‌ಕಟ್‌ಗಳನ್ನು ಬಳಸಿ ಇದರಿಂದ ಸಮಯವೂ ಉಳಿತಾಯವಾಗುವುದರ ಜೊತೆಗೆ ನಿಮ್ಮ ಕೆಲಸವೂ ಆದಷ್ಟು ಬೇಗ ಮುಗಿಯುತ್ತದೆ.

ವೈರಸ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಉತ್ತಮವಾಗಿರುವ ಉಚಿತ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ದೋಷಪೂರಿತವೆಂದು ಕಾಣುವ ಲಿಂಕ್‌ಗಳನ್ನು ತೆರೆಯಬೇಡಿ. ನಂಬಲನರ್ಹವಾದ ಮೂಲಗಳಿಂದ ಪ್ರೊಗ್ರಾಮ್‌ಗಳನ್ನು ಇನ್‌ಸ್ಟಾಲ್ ಮಾಡದಿರಿ.

ನೆಟ್‌ವರ್ಕ್ ಹೊಂದಿಸಿ ರೂಟರ್‌ಗಳನ್ನು, ಮಾಡೆಮ್‌ಗಳನ್ನು ಮತ್ತು ಇತರ ಅಂಶಗಳನ್ನು ಅರಿತುಕೊಳ್ಳುವುದು ನಿಮಗೆ ಕಷ್ಟವನ್ನುಂಟು ಮಾಡಬಹುದು ಆದರೆ ಇದು ನಿಮ್ಮ ಕಂಪ್ಯೂಟರ್ ಕುರಿತ ಬಹಳಷ್ಟು ಸಮಸ್ಯೆಗಳನ್ನು ನೀಗಿಸುವಲ್ಲಿ ಸಹಾಯ ಮಾಡಬಲ್ಲುದು.

ಮನೆಯ ಕಂಪ್ಯೂಟರ್ ಅನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಿ ಡ್ರಾಪ್‌ಬಾಕ್ಸ್‌ನಂತಹ ಸೇವೆಯನ್ನು ಬಳಸಿ ನಿಮ್ಮ ಕಂಪ್ಯೂಟರ್ ಫೈಲ್‌ಗಳನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಿ.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries