ತಿರುವನಂತಪುರಂ: ಕೆಲವು ದಿನಗಳ ಹಿಂದೆ ತಿರುವನಂತಪುರದಲ್ಲಿ ಕೊಳಚೆ ಕಾಲುವೆಯಲ್ಲಿ ಕಣ್ಮರೆಯಾದ ಸ್ವಚ್ಚತಾ ಕಾರ್ಯಕರ್ತನ ಶೋಧನೆಗೆ ಮಳೆಯ ಕಠಿಣ ಸಂದರ್ಭದಲ್ಲೂ ನಡೆಸಿದ ಕಾರ್ಯಚಟುವಟಿಕೆಗಳಿಂದ ಮಾಧ್ಯಮಗಳು ಮತ್ತು ಜನರ ಮನಸ್ಸಿನಲ್ಲಿ ಆರಾಧ್ಯರಾದ ಕೇರಳ ಅಗ್ನಿಶಾಮಕ ದಳದ ಚಟುವಟಿಕೆ ಸ್ತುತ್ಯರ್ಹವಾದರೂ ಸರ್ಕಾರದಿಂದ ಅವರಿಗೆ ಭದ್ರತೆ ಮತ್ತು ಸವಲತ್ತುಗಳು ಅಗತ್ಯ ಪ್ರಮಾಣದಲ್ಲಿ ಲಭಿಸದೆ ಅವರ ಸ್ಥಿತಿ-ಗತಿ ಅತ್ಯಂತ ಶೋಚನೀಯವಾಗಿದೆ ಎಂ ಬುದು ವಾಸ್ತವ.
ಈ ಹೊತ್ತಿನಲ್ಲಿ ಕೇರಳ ಅಗ್ನಿಶಾಮಕ ಸೇವಾ ಚಾಲಕರು ಮತ್ತು ಮೆಕ್ಯಾನಿಕ್ಸ್ ಸಂಘದ ಪ್ರಧಾನ ಕಾರ್ಯದರ್ಶಿ ಕೆಎಲ್ ಎಡ್ವಡ್ರ್ಸ್ ಬರೆದಿರುವ ಪತ್ರವು ಕೆಲವು ಸಂಗತಿಗಳನ್ನು ಒದಗಿಸುತ್ತದೆ. ಪತ್ರದ ಸಂಕ್ಷಿಪ್ತ ರೂಪ:
ಇತ್ತೀಚೆಗಷ್ಟೇ ಕೊಳಚೆ ಕಾಲುವೆಯಲ್ಲಿ ಶೋಧ ನಡೆಸಿರುವುದು, ಚಿತ್ತೂರು ನದಿಯ ಬಂಡೆಯ ಮೇಲೆ ಲುಕಿದ್ದ ನಾಲ್ವರ ಕುಟುಂಬದ ರಕ್ಷಣೆ ಮೊದಲಾದವು ಸುದ್ದಿಯಾಗಿತ್ತು. ಆದರೆ ನಮ್ಮ ಕೆಲಸದ ಹೆಚ್ಚು ಅಪಾಯಕಾರಿ ಸನ್ನಿವೇಶಗಳನ್ನು ಯಾರೂ ಗಮನಿಸದೆ ಹೋಗುತ್ತಾರೆ. ಸೆಪ್ಟಿಕ್ ಟ್ಯಾಂಕ್‍ಗೆ ಬಿದ್ದ ಹಸುವನ್ನು ಎತ್ತಿಕೊಂಡು ಹೋಗುವವರು ನಾವು. ಮರಗಳಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲು, ವಿದ್ಯುತ್ ಕಂಬಗಳ ಮೇಲೆ ವಿದ್ಯುತ್ ಆಘಾತಕ್ಕೊಳಗಾದವರನ್ನು ರಕ್ಷಿಸಲು ನಾವು ನಮ್ಮ ಪ್ರಾಣವನ್ನೇ ಪಣಕ್ಕಿಡುತ್ತೇವೆ.
ಮನೆಗೆ ಬೆಂಕಿ ಬಿದ್ದಾಗ ಎಲ್ಲರೂ ಹೊರಗೆ ಓಡುವಾಗ ಒಳಗೆ ಓಡುವವರು ನಾವೇ. ನಮ್ಮ ಅಪಾಯದ ಭತ್ಯೆ 200 ರೂ. ಆಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಮೂಲ ವೇತನದ 40% ಹೆಚ್ಚುವರಿ ಪಾವತಿಸಲು ಕೇಂದ್ರ ನಿರ್ಧರಿಸಿದೆ. ನಮ್ಮ ಸಂಬಳದ ಶೇ.10ರಷ್ಟಾದರೂ ನೀಡಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ವೆಚ್ಚದ ಲೆಕ್ಕದಲ್ಲಿ ಅರ್ಜಿಯನ್ನು ತಿರಸ್ಕರಿಸುವುದು ವಾಡಿಕೆ. ಕೇಂದ್ರ ಪೋಲೀಸ್ ಕ್ಯಾಂಟೀನ್ ನಲ್ಲಿ ಪಡೆದಿದ್ದ ಸಬ್ಸಿಡಿಯನ್ನು ಈಗ ಹಿಂಪಡೆಯಲಾಗಿದೆ’ ಎಂದು ಅವರ ಸಂಕಷ್ಟದ ಬಗ್ಗೆ ಬರೆದಿರುವರು.