ಜಂಜ್ಗೀರ್-ಚಂಪಾ: ಬಾವಿಯೊಂದರಲ್ಲಿ ಶಂಕಿತ ವಿಪಪೂರಿತ ಅನಿಲ ಸೇವನೆಯಿಂದ ಅಪ್ಪ ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಛತ್ತೀಸ್ಗಢದ ಜಂಜ್ಗೀರ್-ಚಂಪಾ ಜಿಲ್ಲೆಯಲ್ಲಿ ನಡೆದಿದೆ.
ಛತ್ತೀಸಗಢ: ಶಂಕಿತ ವಿಪಪೂರಿತ ಅನಿಲ ಸೇವನೆಯಿಂದ ಐವರ ಸಾವು
0
ಜುಲೈ 05, 2024
Tags
ಜಂಜ್ಗೀರ್-ಚಂಪಾ: ಬಾವಿಯೊಂದರಲ್ಲಿ ಶಂಕಿತ ವಿಪಪೂರಿತ ಅನಿಲ ಸೇವನೆಯಿಂದ ಅಪ್ಪ ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಛತ್ತೀಸ್ಗಢದ ಜಂಜ್ಗೀರ್-ಚಂಪಾ ಜಿಲ್ಲೆಯಲ್ಲಿ ನಡೆದಿದೆ.
ಬಿರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿಕಿರದ್ ಹಳ್ಳಿಯಲ್ಲಿ ಘಟನೆ ನಡೆದಿದೆ.
ರಾಜ್ಯ ವಿಪತ್ತು ನಿರ್ವಹಣಾ ತಂಡವು(ಎಸ್‌ಡಿಆರ್‌ಎಫ್) ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯುವ ಕಾರ್ಯದಲ್ಲಿ ನಿರತವಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ವಿಷ್ಣು ಡಿಯೊ ದುಃಖ ವ್ಯಕ್ತಪಡಿಸಿದ್ದಾರೆ.
ಮೃತರನ್ನು ರಾಮಚಂದ್ರ ಜೈಸ್ವಾಲ್(60), ರಮೇಶ್ ಪಟೇಲ್ (50), ಅವರ ಮಕ್ಕಳಾದ ರಾಜೇಂದ್ರ ಪಟೇಲ್(20), ಜಿತೇಂದ್ರ ಪಟೇಲ್ (25) ಮತ್ತು ತಿಕೇಶ್ವರ್ ಚಂದ್ರ (25) ಎಂದು ಗುರುತಿಸಲಾಗಿದೆ ಎಂದು ಐಜಿಪಿ ಸಂಜೀವ್ ಶುಕ್ಲಾ ಹೇಳಿದ್ದಾರೆ.
ಬಾವಿ ಬಳಿ ಮರದ ತುಂಡನ್ನು ತೆಗೆಯಲು ಹೋಗಿದ್ದ ಜೈಸ್ವಾಲ್, ಬಾವಿಗೆ ಬಿದ್ದಿದ್ದಾರೆ. ಇದನ್ನು ಕಂಡು ಪತ್ನಿ ಕಿರುಚಿಕೊಂಡಾಗ ಮಕ್ಕಳು ಸೇರಿದಂತೆ ಮೂವರು ಬಾವಿಗೆ ಧುಮುಕಿದ್ದಾರೆ. ಅವರೂ ಹೊರಗೆ ಬರದಿದ್ದಾಗ ಚಂದ್ರ ಎಂಬುವವರು ಬಾವಿಗೆ ಇಳಿದಿದ್ದು, ಅವರೂ ಸಹ ಮೃತಪಟ್ಟಿದ್ದಾರೆ. ಬಳಿಕ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಲವು ರಿಂಗ್‌ಗಳಿರುವ ಬಾವಿಯ ಕೆಳಭಾಗದಲ್ಲಿ ನೀರಿದೆ. ಸದ್ಯ, ಎಸ್‌ಡಿಆರ್‌ಎಫ್ ಮೃತದೇಹಗಳನ್ನು ಹೊರತೆಗೆಯುವ ಯತ್ನ ನಡೆಸಿದೆ.