ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಗಾಳಿಗೆ ವಿವಿಧೆಡೆ ಮರಗಳು ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದೆ. ಕಾಸರಗೋಡು ವಿದ್ಯಾನಗರ ಜಿಲ್ಲಾಧಿಕಾರಿ ಕಚೇರಿ ವಠಾರದ ಆವರಣಗೋಡೆ ಸನಿಹದ ಬೃಹತ್ ಮರ ಉರುಳಿದ್ದು, ಈ ಸಂದರ್ಭ ವಿದ್ಯುತ್ ಕಂಬಗಳೂ ಧರಾಶಾಯಿಯಾಗಿದೆ. ಇದರಿಂದ ಈ ಹಾದಿಯಾಗಿ ತಾಸುಗಳ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುವಂತಾಯಿತು.
ಕಾಸರಗೋಡು ಜೆ.ಪಿ ಕಾಲನಿಯಲ್ಲಿ ಬೃಹತ್ ತೆಂಗಿನಮರ ಉರುಳಿಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಚೆರ್ಕಳ ಕೆಎಸ್‌ಇಬಿ ವ್ಯಾಪ್ತಿಯ ಇರಿಯಣ್ಣಿ ಪ್ರದೇಶದಲ್ಲಿ ವ್ಯಾಪಕವಾಗಿ ಮರಉರುಳಿ ವಿದ್ಯುತ್ ತಂತಿಗೆ ಹಾನಿಯುಂಟಾಗಿದೆ.
ಸಮುದ್ರ ಕೊರೆತ ವ್ಯಾಪಕ:
ಉಪ್ಪಳ ಹನುಮಾನ್‌ನಗರದಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದ್ದು, ಹನುಮಾನ್‌ನಗರದಿಂದ ಮಣಿಮುಂಡ ತೆರಳುವ ಕಾಂಕ್ರೀಟ್ ರಸ್ತೆಗೆ ಭಾರಿ ಹಾನಿಯುಂಟಾಗಿದೆ. ಸುಮಾರು ನೂರು ಮೀ. ರಸ್ತೆಗೆ ಹಾನಿಯುಂಟಾಗಿದ್ದು, ತುರ್ತು ದುರಸ್ತಿಕಾರ್ಯ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸಮುದ್ರ ಕೊರೆತದಿಂದ ಹಾನಿಗೀಡಾಗಿರುವ ಪ್ರದೇಶಕ್ಕೆ ಮಹಿಳಾಮೋರ್ಚಾ ರಾಷ್ಟಿçÃಯ ಸಮಿತಿ ಸದಸ್ಯೆ ಎಂ.ಎಲ್ ಅಶ್ವಿನಿ ಭೇಟಿ ನೀಡಿ, ಸಮುದ್ರ ಕೊರೆತದಿಂದ ಹಾನಿಗೀಡಾಗಿರುವ ಪ್ರದೇಶದಲ್ಲಿ ತುರ್ತು ಕಾರ್ಯ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಸಚಿವೆ ಇದ್ದ ರೈಲು ಒಂದು ತಾಸು ವಿಳಂಬ:
ಕೋಟಿಕುಳAನಲ್ಲಿ ರೈಲ್ವೆ ವಿದ್ಯುತ್ ತಂತಿಗೆ ಬೃಹತ್ ತೆಂಗಿನಮರದ ರೆಂಬೆ ಉರುಳಿ ಬಿದ್ದ ಪರಿಣಾಮ ರಾಜ್ಯ ಉನ್ನತ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸಂಚರಿಸುತ್ತಿದ್ದ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಕೋಟಿಕುಳಂನಲ್ಲಿ ಒಂದು ತಾಸಿಗೂ ಹೆಚ್ಚುಕಾಲ ಹಳಿಯಲ್ಲಿ ನಿಲ್ಲಬೇಕಾಗಿಬಂತು. ಗುರುವಾರ ನಸುಕಿಗೆ ರೈಲು ಕೋಟಿಕುಳಂ ತಲುಪಿದಾಗ ವಿದ್ಯುತ್ ತಂತಿಗೆ ತೆಂಗಿನ ರೆಂಬೆಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇದರಿಂದ ಮುಂದೆ ಚಲಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಚೆರ್ವತ್ತೂರಿನಿಂದ ರೈಲ್ವೆ ಇಂಜಿನಿಯರಿAಗ್ ವಿಭಾಗದ ತಂತ್ರಜ್ಞರು ಆಗಮಿಸಿ ವಿದ್ಯುತ್ ತಂತಿಗೆ ಸಿಲುಕಿಕೊಂಡಿದ್ದ ರೆಂಬೆ ತೆರವುಗೊಳಿಸಿದ ನಂತರ ರೈಲು ಕಾಸರಗೋಡು ಭಾಗಕ್ಕೆ ಸಂಚಾರ ನಡೆಸಿದೆ.