ಮಧೂರು: ತರುಣ ಕಲಾ ವೃಂದ ಉಳಿಯ ಇದರ ಮಹಾ ಸಭೆಯು ಸಂಘದ ಕಾರ್ಯಾಲಯದಲ್ಲಿ ನಡೆಯಿತು. ವಿಠಲ ಗಟ್ಟಿ ಪರಕ್ಕಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಜಿತ್ ಕುಮಾರ್ ಗತವರ್ಷದ ವರದಿಯನ್ನು ಮಂಡಿಸಿದರು. ಅರುಣ್ ರಾಜ್ ಲೆಕ್ಕಪತ್ರ ಮಂಡಿಸಿದರು. ಬಳಿಕ ಸಂಘದ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಗೌರವಾಧ್ಯಕ್ಷರಾಗಿ ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರ , ಅಧ್ಯಕ್ಷರಾಗಿ ಸುರೇಶ್. ಯು.ಆರ್, ಉಪಾಧ್ಯಕ್ಷರಾಗಿ ರಾಜೇಶ್ ಗಟ್ಟಿ, ಸಂತೋಷ್ ಗಟ್ಟಿ, ಕಾರ್ಯದರ್ಶಿ ಪದ್ಮರಾಜ ಗಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಅಜಿತ್ ಕುಮಾರ್ ಮತ್ತು ಜಗದೀಶ್ ಆಚಾರ್ಯ, ಕಲಾ ಕಾರ್ಯದರ್ಶಿಗಳಾಗಿ ಜಯರಾಮ ಗಟ್ಟಿ ಮತ್ತು ಯೋಗೀಶ , ಕ್ರೀಡಾ ಕಾರ್ಯದರ್ಶಿಗಳಾಗಿ ಕಮಲಾಕ್ಷ, ಸಚ್ಚು ಮತ್ತು ಅನಿಲ್ ಉಳಿಯ, ಕೋಶಾಧಿಕಾರಿ ಅರುಣ್ ರಾಜ್, ಲೆಕ್ಕ ಪರಿಶೋಧಕರಾಗಿ ಅನಿಲ್ ಕುಮಾರ್, ಸವಿನ್, ಜಿತೇಶ್, ವಾಸು, ದಿನೇಶ್, ಉದಯ, ರಾಮ ಗಟ್ಟಿ, ತಿಲಕೇಶ್, ಹರೀಶ್,ಸುರೇಶ್, ಶರತ್ ಬಾಬು ಎಂಬಿವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸಲಹಾ ಸಮಿತಿಯನ್ನು ರಚಿಸಲಾಯಿತು. ಇದರ ಸದಸ್ಯರಾಗಿ ಯು. ಬಾಲಕೃಷ್ಣ, ರಾಧಾಕೃಷ್ಣ ಉಳಿಯತಡ್ಕ, ಶಿವ ಚೇನಕ್ಕೋಡ್, ವಿಠಲ ಗಟ್ಟಿ, ಪ್ರಭಾಕರ ಉಳಿಯ, ಗೋಪಾಲ ಉಳಿಯ, ಆನಂದ ಆಚಾರ್ಯ, ಎಸ್ ಜಿ. ನಾರಾಯಣ ಎಂಬಿವರನ್ನು ಆಯ್ಕೆ ಮಾಡಲಾಯಿತು. ಆರೋಗ್ಯನಿಧಿ ಸಮಿತಿ ಸದಸ್ಯರಾಗಿ ರವಿ.ಯು ಕೆ, ಹರೀಶ್.ಯು ಎನ್, ಉದಯ.ಯು ಕೆ ಎಂಬಿವರನ್ನು ಆರಿಸಲಾಯಿತು. ಸವಿನ್ ಸ್ವಾಗತಿಸಿ ಅರುಣ್ ರಾಜ್ ವಂದಿಸಿದರು.