ಕೋಝಿಕ್ಕೋಡ್: ವಯನಾಡಿನ ಮುಂಡಕೈಯಲ್ಲಿ ನಡೆದ ಘಟನೆ ಭಾರೀ ದುರಂತವಾಗಿದ್ದು, ಎಲ್ಲ ರೀತಿಯ ನೆರವು ನೀಡುವುದಾಗಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
ವಯನಾಡ್ ಶಿಬಿರಗಳಿಗೆ ಭೇಟಿ ರಾಜ್ಯಪಾಲರು ನೀಡಲಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಸಹಾಯವನ್ನು ನಿರೀಕ್ಷಿಸುವುದಾಗಿ ರಾಜ್ಯಪಾಲರು ಹೇಳಿದರು.
ಕೋಝಿಕ್ಕೋಡ್‌ನಲ್ಲಿ ರಾಜ್ಯಪಾಲರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಮುಖ್ಯಮಂತ್ರಿಗಳು ಹೇಳಿದಂತೆ 2018 ಮತ್ತು 2019 ರಲ್ಲಿ ಕೇರಳದಲ್ಲಿ ಉಂಟಾದ ದುರಂತಗಳಿAದ ಎದುರಿಸಲಾಗಿತ್ತು. ಇಂದೂ ಅದೇ ನಿರೀಕ್ಷೆಯಿದೆ ಎಂದು ರಾಜ್ಯಪಾಲರು ಮಾಧ್ಯಮಗಳಿಗೆ ತಿಳಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲರು ಇಂದು ವಯನಾಡ್ ಗೆ ಭೇಟಿ ನೀಡಿದರು. 2018 ರಲ್ಲಿ ಪ್ರವಾಹ ಉಂಟಾದಾಗ, ದುರಂತ ಸಂತ್ರಸ್ತರಿಗೆ ಸಹಾಯ ಮಾಡಲು ಕೇರಳದ ಎಲ್ಲರೂ ಒಗ್ಗೂಡಿದ್ದರು. ಆ ಹಂತದಲ್ಲಿ ಜಗತ್ತಿನ ವಿವಿಧ ಭಾಗಗಳಿಂದ ಸಹಾಯಹಸ್ತ ಚಾಚಿತ್ತು. ಅದೇ ರೀತಿ ವಯನಾಡಿನಲ್ಲಿ ಇದೀಗ ಸಂಭವಿಸಿದ ಭೂಕುಸಿತದಿಂದ ನೊಂದವರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ನಾವೆಲ್ಲರೂ ಒಗ್ಗೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿಗಳು ನಿನ್ನೆ ಹೇಳಿದ್ದರು.
ಏತನ್ಮಧ್ಯೆ, ಭೂಕುಸಿತದಲ್ಲಿ ಸತ್ತವರ ಸಂಖ್ಯೆ 159 ಕ್ಕೆ ಏರಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. 191 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಎರಡನೇ ದಿನದ ಶೋಧ ಕಾರ್ಯ ನಡೆಯುತ್ತಿದೆ.