HEALTH TIPS

ಮಕ್ಕಳಲ್ಲಿ ಆಟಿಸಂ ಕಾಣಿಸಿಕೊಳ್ಳೋದು ಏಕೆ.? ಕ್ಲೀನಿಕಲ್ ಸೈಕಾಲಜಿಸ್ಟ್ ಹೇಳೋದೇನು..?

 ಮಕ್ಕಳಲ್ಲಿ ಅತೀಯಾಗಿ ಕಾಡುವ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ನಮಗೆ ಗೊತ್ತಿರುವ ವಿಚಾರ. ಈ ಮಗು ಸಾಮಾನ್ಯ ಮಕ್ಕಳಂತೆ ಕಂಡುಬಂದರೂ ಕೆಲವು ವಿಚಾರದಲ್ಲಿ ಮಗು ಎಲ್ಲಾ ಮಕ್ಕಳಿಂದ ಹೊರಗುಳಿದಿರುವಂತೆ ಭಾಸವಾಗುತ್ತದೆ.

ಆಟಿಸಂಗೆ ಕನ್ನಡದಲ್ಲಿ ಸ್ವಲೀನತೆ ಎನ್ನಲಾಗುತ್ತದೆ. ಇದೊಂದು ನ್ಯೂರೋ ಡೆವಲಪ್‌ಮೆಂಟಲ್ ಡಿಸಾರ್ಡರ್. ಮೇಲ್ನೋಟಕ್ಕೆ ಇದೊಂದು ರೋಗವಲ್ಲ ಎಂದು ಪರಿಗಣಿಸಲಾಗಿದ್ದರೂ ಮಕ್ಕಳಲ್ಲಿ ಕಂಡುಬರುವ ಮಾನಸಿಕ ಅಸ್ತಿತ್ವ ಎನ್ನಬಹುದು. ಆಟಿಸಂಗೆ ಒಳಗಾದ ಮಗುವನ್ನು ಪತ್ತೆ ಮಾಡುವುದೇ ಒಂದು ಸವಾಲು. ಏಕೆಂದರೆ ಈ ಆಟಿಸಂಗೆ ಒಳಗಾದ ಮಕ್ಕಳನ್ನು ಉಳಿದ ಮಕ್ಕಳಂತೆಯೇ ಇದ್ದರೂ ಆಟಿಸಂ ಲಕ್ಷಣ ಅವರಲ್ಲಿ ಕಂಡುಬರಬಹುದು.

ಆಟಿಸಂ ಎಂದರೇನು?

ಆಟಿಸಂ ಎಂಬುದು ಮಗುವೊಂದು ತನ್ನ ಬಾಲ್ಯಾವಸ್ಥೆಯಲ್ಲಿ ಒಳಗಾಗುವ ಮಾನಸಿಕ ಸ್ಥಿತಿ ಎನ್ನಬಹುದು. ಹೊರ ಜಗತ್ತಿನ ವಿಚಾರಗಳಿಂದ ಹೊರಗುಳಿಯುವ ಮಗು ತನ್ನದೇ ಪ್ರಪಂಚ ಕಟ್ಟಿಕೊಂಡಿರುವ ಒಂದು ವಿಚಿತ್ರ ಪರಿಸ್ಥಿತಿ ಇದು. ಇದು ಮನೋರೋಗವಲ್ಲ ಬದಲಿಗೆ ಇಂದು ನರಸಂಬಂಧಿ ನ್ಯೂನತೆ ಎನ್ನಬುಹುದು ಎಂದು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ವಿವರಿಸುತ್ತಾರೆ.

ಆಟಿಸಂ ಮಕ್ಕಳ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಾಮಾಜಿಕ ಸೌಹಾರ್ದತೆ, ಮಾತು, ನಡವಳಿಕೆ, ಮಾನಸಿಕ ಆರೋಗ್ಯ, ಮಕ್ಕಳು ಬೆರೆಯದೆ ಇರುವುದು ಹೀಗೆ ಅವರಲ್ಲಿ ಹಲವು ಲಕ್ಷಣಗಳು ಕಾಣಿಸಿಕೊಳ್ಳಲಿದೆ.

ಆಟಿಸಂ ಯಾವ ವಯಸ್ಸಿನವರಲ್ಲಿ ಹೆಚ್ಚು?

ಮೊದಲೇ ಹೇಳಿದಂತೆ ಈ ಆಟಿಸಂ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತದೆ. 18ರಿಂದ 24 ತಿಂಗಳ ಒಳಗೆಯೇ ಮಗುವಿನಲ್ಲಿ ಇದರ ಲಕ್ಷಣಗಳು ಗೋಚರವಾಗಲು ಆರಂಭವಾಗುತ್ತದೆ. ಆರಂಭದಲ್ಲಿ ಈ ಆಟಿಸಂನ ಲಕ್ಷಣಗಳ ಪತ್ತೆ ಮಾಡುವುದು ಕಷ್ಟವಾಗಬಹುದು ಎಂಬುದು ಕ್ಲೀನಿಕಲ್ ಸೈಕಾಲಜಿಸ್ಟ್‌ ಮಾತಾಗಿದೆ.

ಸ್ವಲೀನತೆ ಹೊಂದಿರುವ ಮಗು ಒಂದೇ ಕ್ರಿಯೆಯಲ್ಲಿ ಹೆಚ್ಚು ಗಮನ ಇಡುವುದು ಅಥವಾ ಪದೇ ಪದೇ ಪುನರಾವರ್ತಿಸುವ ಕಾರ್ಯ ಮಾಡಲಿದೆ. ಅಂದರೆ ಒಂದೇ ಮಾತು ಪದೇ ಪದೇ ಹೇಳುತ್ತಿರುವುದು. ಯಾರ ಜೊತೆಯೂ ಅವರು ಬೆರೆಯಲು ಇಷ್ಟಪಡುವುದಿಲ್ಲ. ಹೊಸ ಜಾಗ, ಸ್ಥಳ ಕಂಡರೆ ಗೊಂದಲ, ಭಯ ಕಾಡುತ್ತಿರುತ್ತದೆ. ಒಂದು ವಸ್ತುವನ್ನು ಹೆಚ್ಚಾಗಿ ಹಚ್ಚಿಕೊಳ್ಳುವುದು, ಮಾತು ನಿಧಾನವಾಗಿ ಆಡುವುದು, ಒಂದೇ ಪದದಲ್ಲಿ ಮಾತು ಮುಗಿಸುವುದು ಸೇರಿ ಇನ್ನಷ್ಟು ಲಕ್ಷಣಗಳು ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಕ್ಲೀನಿಕಲ್ ಸೈಕಾಲಜಿಸ್ಟ್ .

ಮಕ್ಕಳಲ್ಲಿ ಆಟಿಸಂ ಕಾಣಿಸಿಕೊಳ್ಳಲು ಕಾರಣವೇನು?

ತಂದೆ ತಾಯಿಯ ಆರೈಕೆಯಲ್ಲಿ ಕೊರತೆ

ಮಕ್ಕಳಲ್ಲಿ 3 ವರ್ಷದ ಕೆಳಗೆ ಅವರಿಗೆ ಹೆಚ್ಚಿನ ಆರೈಕೆಯ ಆಗತ್ಯವಿರುತ್ತದೆ. ಆದರೆ ಇಂದು ತಂದೆ-ತಾಯಿ ಚಿಕ್ಕ ಮಕ್ಕಳ ಜೊತೆ ಬೆರೆಯುವುದು ಕಷ್ಟವಾಗುತ್ತಿರುತ್ತದೆ. ತಂದೆ ತಾಯಿ ಇಬ್ಬರೂ ಸಹ ಕೆಲಸ ಮಾಡುತ್ತಿದ್ದರೆ ಅಥವಾ ಮಗುವನ್ನು ಬೇಟಿ ಸಿಟ್ಟಿಂಗ್‌ನಂತಹ ವ್ಯವಸ್ಥೆಗೆ ಚಿಕ್ಕ ವಯಸ್ಸಿನಲ್ಲೇ ಬಿಡುವುದು ಮಕ್ಕಳ ಬೆಳವಣಿಗೆ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ.

ಅನುವಂಶೀಯ ಕಾರಣ

ತಂದೆ-ತಾಯಿ ಮಗುವಿಗೆ ಹೆಚ್ಚು ಸಮಯ ಕೊಡದಿರುವುದು ಒಂದು ಕಾರಣವಾದರೆ ಅನುವಂಶೀಯ ಕಾರಣವೂ ಸಹ ಈ ಆಟಿಸಂಗೆ ಪ್ರಮುಖ ಕಾರಣವಾಗಿದೆ. ತಂದೆ-ತಾಯಿ ಅಥವಾ ಕುಟುಂಬ ಸದಸ್ಯರಲ್ಲಿ ಯಾರಾದರು ಈ ಆಟಿಸಂಗೆ ಒಳಗಾಗಿದ್ದರೆ ಹುಟ್ಟುವ ಮುಕ್ಕಳಿಲ್ಲಿ ಕಂಡುಬರುವ ಸಾಧ್ಯತೆ ಹೆಚ್ಚು.

ಪೋಷಕರ ವಯಸ್ಸು

ಪೋಷಕರು ಯಾವ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ ಎಂಬುದು ಸಹ ಈ ಆಟಿಸಂ ಕಾರಣಗಳಲ್ಲಿ ಒಂದಾಗಿದೆ. ಏಕೆಂದರೆ ತಾಯಿಯ ವಯಸ್ಸು 35ಕ್ಕಿಂತ ಹೆಚ್ಚು ಹಾಗೂ ತಂದೆಯ ವಯಸ್ಸು 40 ಮೀರಿದ್ದರೆ ಪುರುಷರಲ್ಲಿನ ಸ್ಮರ್ಮ್ ಡೆನ್ಸಿಟಿ ಹಾಗೂ ಓವರಿ ಡೆನ್ಸಿಟಿ ಕಡಿಮೆಯಾಗುವ ಕಾರಣದಿಂದಾಗಿ ಹುಟ್ಟುವ ಮಕ್ಕಳಲ್ಲಿ ಆಟಿಸಂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಕ್ಲೀನಿಕಲ್ ಸೈಕಾಲಜಿಸ್ಟ್ .


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries