ಮಂಜೇಶ್ವರ: ಕಲಾವಿದರ ಸಂಘಟನೆಯಾದ ಸವಾಕ್(ಕೇರಳ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್) ನ ಮಂಜೇಶ್ವರ ಬ್ಲಾಕ್ ಸಮಾವೇಶ ಭಾನುವಾರ ಮಂಜೇಶ್ವರದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಉಮೇಶ್ ಎಂ ಸಾಲಿಯಾನ್ ಉದ್ಘಾಟಿಸಿದರು. ಬ್ಲಾಕ್ ಅಧ್ಯಕ್ಷ ಜೀನ್ ಲವಿನೋ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ನರಸಿಂಹ ಬಲ್ಲಾಳ್ ಮಾತನಾಡಿದರು. ಸವಾಕ್ ಜಿಲ್ಲಾ ಉಪಾಧ್ಯಕ್ಷ ದಿವಾಕರ ಅಶೋಕ ನಗರ, ಜಿಲ್ಲಾ ಖಜಾಂಚಿ ಚಂದ್ರಹಾಸ ಕಯ್ಯಾರ್, ಬ್ಲಾಕ್ ಕಾರ್ಯದರ್ಶಿ ಜಯಶ್ರೀ ಮೊಂತೇರೊ, ನೂತನ್ ಚಕ್ರವರ್ತಿ ಮಾತನಾಡಿದರು. ವಿದ್ಯೋನ್ ಜಯರಾಮ ಮಂಜೇಶ್ವರ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಸವಾಕ್ ನ ಮಂಜೇಶ್ವರ ಬ್ಲಾಕ್‌ನ ಪದಾಧಿಕಾರಿಗಳಾಗಿ ಜಿನಲಾವಿನೋ ಮೊಂತೇರೊ (ಅಧ್ಯಕ್ಷರು) ನೂತನ್ ಚಕ್ರವರ್ತಿ (ಕಾರ್ಯದರ್ಶಿ) ಜಯಶ್ರೀ ಮೊಂತೆರೊ (ಖಜಾಂಚಿ), ಉಪಾಧ್ಯಕ್ಷರಾಗಿ ಸುಜಾತಾ ಮತ್ತು ಕೃಷ್ಣ ಎಚ್, ಜೊತೆ ಕಾರ್ಯದರ್ಶಿಗಳಾಗಿ ಚಂದ್ರಹಾಸ ಪೆರ್ಲ ಮತ್ತು ರಾಧಾ ಕೃಷ್ಣ ಬಲ್ಲಾಳ್ ಆಯ್ಕೆಯಾದರು. ಅಲ್ಲದೆ ೧೭ ಮಂದಿ ಸದಸ್ಯರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.