ಫೇಸ್ ಬುಕ್ ನ ಪ್ರೀತಿಯ ಸೆಲೆಗೆ ಸಿಲುಕಿ ಪ್ರಿಯಕರನನ್ನು ಹುಡುಕಿ ಹೊರಟ ಸೀಮಾ ಹೈದರ್ ಮತ್ತು ಅಂಜು ಅವರ ಕಥೆಗಳು ಸಾಕಷ್ಟು ಸುದ್ದಿ ಮಾಡಿದ್ದವು. ಸೀಮಾ ಹೈದರ್ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರೆ, ಅಂಜು ರಾಜಸ್ಥಾನದ ಅಲ್ವಾರ್‌ನಿಂದ ಪಾಕಿಸ್ತಾನಕ್ಕೆ ತೆರಳಿದ್ದಳು. ಇದೀಗ ಈ ಪಟ್ಟಿಗೆ ಮೆಹ್ವೀಶ್ ಹೆಸರು ಸೇರ್ಪಡೆಯಾಗಿದೆ. ಚುರು ಜಿಲ್ಲೆಯ ವಿವಾಹಿತನನ್ನು ಪ್ರೀತಿಸುತ್ತಿದ್ದ ಪಾಕಿಸ್ತಾನದ ವಿಚ್ಛೇದಿತ ಮಹಿಳೆ ಮೆಹ್ವೀಶ್ ಇದೀಗ ಪ್ರಿಯಕರನನ್ನು ಹುಡುಕಿಕೊಂಡು ಪಾಕಿಸ್ತಾನದ ಗಡಿದಾಟಿ ಭಾರತಕ್ಕೆ ಬಂದಿದ್ದಾಳೆ.
ಮೆಹ್ವೀಶ್ ಅವರ ಕಥೆಯು ಪ್ರೇಮಕ್ಕೆ ಯಾವುದೇ ಗಡಿಗಳಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ನಿಜವಾದ ಪ್ರೀತಿಯು ಯಾವುದೇ ಗಡಿ ಮತ್ತು ಯಾವುದೇ ಅಡೆತಡೆಗಳನ್ನು ನಿವಾರಿಸಬಲ್ಲದು ಎಂದು ಅದು ತೋರಿಸಿದೆ. ಮೆಹ್ವೀಶ್ ಅವರ ಈ ಪ್ರಯಾಣವು ಅವರ ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳನ್ನು ತಂದಿತು ಮಾತ್ರವಲ್ಲದೆ ಎರಡು ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡಿದೆ.
ಮೆಹ್ವೀಶ್ ಪಾಕಿಸ್ತಾನದ ಲಾಹೋರ್ ನಿವಾಸಿ. ಆಕೆಗೆ ಕೇವಲ 2 ವರ್ಷದವರಾಗಿದ್ದಾಗ ಅವರ ತಾಯಿ ನಿಧನರಾದರು. ತಂದೆ ಜುಲ್ಫಿಕರ್ ಕೂಡ 15 ವರ್ಷಗಳ ಹಿಂದೆ ಜಗತ್ತಿಗೆ ವಿದಾಯ ಹೇಳಿದ್ದರು. 12 ವರ್ಷಗಳ ಹಿಂದೆ ಆಕೆ ತನ್ನ ಸಹೋದರಿ ಸಹಿಮಾಳನ್ನು ಸೇರಲು ಇಸ್ಲಾಮಾಬಾದ್‌ಗೆ ಬಂದಿದ್ದಳು. ಇಲ್ಲಿ ಮೆಹ್ವೀಶ್ ಎರಡು ತಿಂಗಳ ಕಾಲ ಬ್ಯೂಟಿ ಪಾರ್ಲರ್ ಕೋರ್ಸ್ ಮಾಡಿದರು.
ಇದಾದ ನಂತರ ಮೆಹ್ವೀಶ್ ಕಳೆದ 10 ವರ್ಷಗಳಿಂದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. 2006ರಲ್ಲಿ ಬಾದಾಮಿ ಬಾಗ್‌ನ ವ್ಯಕ್ತಿಯನ್ನು ಮೆಹ್ವೀಶ್ ವಿವಾಹವಾಗಿದ್ದರು. ಅವರಿಗೆ ಮೊದಲ ಪತಿಯಿಂದ 12 ವರ್ಷ ಮತ್ತು 7 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯ ನಂತರ ಮೊದಲ ಪತಿ ಆಕೆಯನ್ನು ತೊರೆದು ಮರುಮದುವೆಯಾಗಿದ್ದರು.
ಮೆಹ್ವೀಶ್ 2018ರಲ್ಲಿ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದಳು. ಆಕೆ ಪ್ರಸ್ತುತ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಆದರೆ ಇತ್ತೀಚೆಗಷ್ಟೇ ಪಾಕಿಸ್ತಾನದ ಹುಡುಗಿಯೊಬ್ಬಳು ರೆಹಮಾನ್‌ನನ್ನು ಭೇಟಿಯಾಗಲು ಚುರುವಿಗೆ ಬಂದಿದ್ದಾಳೆ ಎಂದು ರೆಹಮಾನ್‌ನ ಹೆಂಡತಿಗೆ ತಿಳಿದಾಗ, ಅವಳು ಪೊಲೀಸ್ ಠಾಣೆಗೆ ಬಂದು ಈ ಹುಡುಗಿಯೂ ಗೂಢಚಾರಿಕೆಯಾಗಿರಬಹುದು ಎಂದು ತಿಳಿಸಿದ್ದರು.
ಮೊದಮೊದಲು ಇಬ್ಬರ ನಡುವೆ ನಂಬರ್ ವಿನಿಮಯವಾಯಿತು. ಇದಾದ ನಂತರ ಸುದೀರ್ಘ ಮಾತುಕತೆಗಳ ಸರಣಿ ಆರಂಭವಾಯಿತು. ಕ್ರಮೇಣ ರೆಹಮಾನ್ ಮತ್ತು ಮೆಹ್ವೀಶ್ ಪರಸ್ಪರ ಹತ್ತಿರವಾಗತೊಡಗಿದರು. ಇಬ್ಬರೂ ಪರಸ್ಪರರ ಒಡನಾಟವನ್ನು ತುಂಬಾ ಇಷ್ಟಪಡಲು ಪ್ರಾರಂಭಿಸಿದರು. ಇದಾದ ನಂತರ ಈ ಸಂಬಂಧಕ್ಕೆ ಹೊಸ ಹೆಸರು ಇಡಲು ಇಬ್ಬರೂ ನಿರ್ಧರಿಸಿದ್ದು, ನಂತರ ಇಬ್ಬರೂ ಆನ್‌ಲೈನ್‌ನಲ್ಲಿ ಮದುವೆಯಾಗಿದ್ದರು. ಮೆಹ್ವೀಶ್ ಅವರು ಪಾಕಿಸ್ತಾನದ ನ್ಯಾಯಾಲಯದಲ್ಲಿ ತಮ್ಮ ದಾಖಲೆಗಳನ್ನು ಸಲ್ಲಿಸಿದರು. ವಿಶೇಷವೆಂದರೆ ರೆಹಮಾನ್ ಅವರನ್ನು ಮದುವೆಯಾಗುವ ಮುನ್ನ ಮೆಹ್ವೀಶ್ ಮನೆಯವರ ಒಪ್ಪಿಗೆ ಪಡೆದಿದ್ದಳು.
ಈ ಮದುವೆಗೆ ರೆಹಮಾನ್ ಪತ್ನಿ ಕೂಡ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಇದೀಗ ರೆಹಮಾನ್ ಪತ್ನಿ ಪೊಲೀಸ್ ಠಾಣೆಗೆ ಆಗಮಿಸಿ ಆತನ ನೂತನ ಪತ್ನಿ ಮೆಹ್ವೀಶ್ ಗೂಢಚಾರಿಕೆ ಎಂದು ಆರೋಪಿಸಿದ್ದಾಳೆ.