HEALTH TIPS

ಕುಂಬಳೆ ಹೆಸರನ್ನು ಮೆರೆಸಿದ ಮೇರು ಕಲಾವಿದ ಶ್ರೀಧರರಾಯರಿಗೆ ತಾಯ್ನಾಡ ಕಂಬನಿ: ಕುಂಬ್ಳೆ ಶ್ರೀಧರರಾಯರು ಪಾತ್ರಗಳನ್ನು ಸೃಜಿಸಿದ ಸೃಷ್ಟಿಶೀಲ ಕಲಾವಿದ: ನಾ. ಕಾರಂತ

                ಬದಿಯಡ್ಕ: ತೆಂಕುತಿಟ್ಟಿನ ಹಿರಿಪರಂಪರೆಯ ಮೇರು ಕಲಾವಿದರ ಸಾಲಲ್ಲಿ ದಿ.ಕುಂಬ್ಳೆ ಶ್ರೀಧರ ರಾಯರು ಗರತಿ ಪಾತ್ರಗಳಲ್ಲಿ ಅಚ್ಚೊತ್ತಿ, ಮಾದರಿ ಪಾತ್ರ ಸೃಜಿಸಿದ ಸೃಷ್ಟಿಶೀಲ ಕಲಾವಿದ. ಶೇಣಿ, ಸಾಮಗ ಸಹಿತ ಗತ ಪರಂಪರೆ ಮೇರು ಕಲಾವಿದರ ಜತೆ ರಂಗದಲ್ಲಿ ಅಷ್ಟೇ ಸಮರ್ಥವಾಗಿ ಮೆರೆದು ಎಲ್ಲರ ಪ್ರೀತಿಗೆ ಪಾತ್ರರಾದವರು. ಅವರ ಕಲಾಬದುಕಿನ ಆಳ-ಅಗಲ ಅತ್ಯಂತ ವಿಸ್ತಾರವಾದುದು ಎಂದು ಹಿರಿಯ ಪತ್ರಕರ್ತ, ಅಂಕಣಗಾರ, ಕಲಾವಿದ ನಾ. ಕಾರಂತ ಪೆರಾಜೆ ನುಡಿದರು.


               ನೀರ್ಚಾಲಿನ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಭಾನುವಾರ ನಡೆದ 'ಕಣಿಪುರ' ಮಿತ್ರ ಬಳಗ ಮತ್ತು ಕುಂಬ್ಳೆ ಶ್ರೀಧರ ರಾವ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲ್ಪಟ್ಟ ಕುಂಬ್ಳೆ ಶ್ರೀಧರ ರಾವ್ ನುಡಿನಮನ-ಶ್ರದ್ದಾಂಜಲಿ ತಾಳಮದ್ದಳೆಯಲ್ಲಿ ಅವರು ನುಡಿನಮನ ಸಲ್ಲಿಸಿ ಮಾತಾಡಿದರು.

                ಕಾರ್ಯಕ್ರಮವನ್ನು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಉದ್ಘಾಟಿಸಿ "ನಮ್ಮ ನೆಲಕ್ಕೆ ಕೀರ್ತಿ ತಂದ ಕಲಾವಿದರನ್ನು ಸ್ಮರಿಸುವುದು ನಮ್ಮ ಬದುಕಿನ ಭಾಗವಾಗಬೇಕು"ಎಂದರು.


           ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಶ್ರೀಧರ ಸ್ಮೃತಿಯ ನಲ್ನುಡಿಗಳನ್ನಾಡಿದರು.

     ಅಭಿನಂದನಾ ಗ್ರಂಥ ಸಂಸ್ಮರಣಾ ಗ್ರಂಥವಾಗಿ ಡಿಸೆಂಬರಿನಲ್ಲಿ ಬಿಡುಗಡೆ:

      ಕುಂಬ್ಳೆ ಶ್ರೀಧರರಾಯರ ಹುಟ್ಟೂರು ಕುಂಬಳೆಯಲ್ಲಿ ಅವರಿಗೆ ಸಾರ್ವಜನಿಕ ಅಭಿನಂದನೆಯೊAದಿಗೆ ಗ್ರಂಥ ಸಮರ್ಪಣೆಗೆ ಸಿದ್ಧತೆ ನಡೆಯುತ್ತಿತ್ತು. ದಿಢೀರನೆ ಅವರಗಲಿದ ಹಿನ್ನೆಲೆಯಲ್ಲಿ ಮುಂಬರುವ ಡಿಸೆಂಬರಿನಲ್ಲಿ ಕುಂಬ್ಳೆಯಲ್ಲೇ ಸಂಸ್ಮರಣಾಗ್ರAಥವಾಗಿ ಅದು ಬಿಡುಗಡೆಯಾಗಿ ಅವರ ದಿವ್ಯಾತ್ಮಕ್ಕೆ ಅರ್ಪಣೆ ಆಗಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಭಗವಾನ್ ದಾಸ್ ಬೆಂಗಳೂರು ಹೇಳಿದರು. ಹುಟ್ಟೂರಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಸುವುದು ಅವರ ಕನಸಾಗಿತ್ತು. ಅದನ್ನು ಮರಣೋತ್ತರ ಈಡೇರಿಸಬೇಕಾದುದು ಅವರ ಹುಟ್ಟೂರ ಅಭಿಮಾನಿಗಳ ಧರ್ಮ ಎಂದವರು ನೆನಪಿಸಿದರು. 

          ಕುಮಾರಸ್ವಾಮಿ ಭಜನಾಮಂದಿರ, ಸಭಾಗೃಹದ ಅಧ್ಯಕ್ಷ ನಾರಾಯಣ ರೈ, ಬಿ.ಕೆ. ಕೃಷ್ಣ ಟೈಲರ್ ನೀರ್ಚಾಲು ಉಪಸ್ಥಿತರಿದ್ದರು. 'ಕಣಿಪುರ' ಸಂಪಾದಕ, ಲೇಖಕ ಎಂ.ನಾ. ಚಂಬಲ್ತಿಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

           ಡಾ. ಕೆ. ಕಮಲಾಕ್ಷ ಕಾಸರಗೋಡು, ಡಾ. ಬೇ.ಸಿ.ಗೋಪಾಲಕೃಷ್ಣ ಭಟ್, ವಿಶಾಲಾಕ್ಷ ಪುತ್ರಕಳ, ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್, ಕಲಾವಿದ ಶಿವಶಂಕರ ದಿವಾಣ, 'ಕಥಾಕೀರ್ತನ'ದ ಶಂನಾಡಿಗ ಕುಂಬ್ಳೆ, ಮಂಜುನಾಥ್  ಮಾನ್ಯ, ನ್ಯಾಯವಾದಿ ಉದನೇಶ್ವರ, ಲಕ್ಷ್ಮಣ ಪ್ರಭು ಬದಿಯಡ್ಕ  ಸಹಿತ ನೂರಾರು ಗಣ್ಯ ಕಲಾಭಿಮಾನಿಗಳು ಪಾಲ್ಗೊಂಡು ಶ್ರೀಧರ ಸ್ಮೃತಿಯೊಂದಿಗೆ ಅಗಲಿದ ಮೇರು ಕಲಾವಿದನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಶ್ರದ್ಧಾಂಜಲಿಯಾಗಿ ಸಮರ್ಪಣೆಯಾದ "ಶ್ರೀರಾಮ ಪರಂಧಾಮ" ತಾಳಮದ್ದಳೆ:

         ಅಗಲಿದ ಶ್ರೀಧರ ರಾಯರಿಗೆ ಶ್ರದ್ಧಾಂಜಲಿಯಾಗಿ ಅರ್ಪಣೆಯಾದ "ರಾಮಪರಂಧಾಮ" ತಾಳಮದ್ದಳೆ ಜನಮನಸೂರೆಗೊಂಡಿತು. ಭಾಗವತಿಕೆಯಲ್ಲಿ ಕು. ಕೃತ್ತಿಕಾ ಖಂಡೇರಿ, ಶಿವಶಂಕರ ಭಟ್ ತಲ್ಪನಾಜೆ, ಡಾ. ಸತೀಶ ಪುಣಿಂಚಿತ್ತಾಯ ಪಾಲ್ಗೊಂಡರು. ಹಿಮ್ಮೇಳದ ಚೆಂಡೆ, ಮದ್ದಳೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಉದಯ ಕಂಬಾರು, ಮುರಳೀಧರ, ಮಾ. ಸಮೃದ್ಧ ಪುಣಿಂಚಿತ್ತಾಯ ಭಾಗವಹಿಸಿದರು.

           ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಪಕಳಕುಂಜ ಶ್ಯಾಂಭಟ್,ನಾ. ಕಾರಂತ ಪೆರಾಜೆ, ಗೋಪಾಲ್ ಕುಂಬ್ಳೆ, ಶೇಣಿ ವೇಣುಗೋಪಾಲ ಭಟ್ ಭಾಗವಹಿಸಿ ಆಖ್ಯಾನವನ್ನು ಶ್ರೀಧರ ಸ್ಮೃತಿಯಾಗಿ ಸಮರ್ಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries