ಬದಿಯಡ್ಕ: ದೇವತಾರಾಧನೆಯು ಸಂಸ್ಕಾರದ ಭಾಗವಾಗಬೇಕು ಎನ್ನುವ ದೃಷ್ಟಿಯಿಂದ ಪೂರ್ವಿಕರು ದೇವಾಲಯಗಳನ್ನು ಪ್ರತಿμÁ್ಠಪಿಸಿದರು ಎನ್ನುವ ಎಚ್ಚರಿಕೆ ಪ್ರತಿಯೊಬ್ಬ ಭಾರತೀಯನಿಗೂ ಬೇಕು. ಅದನ್ನು ಸದೃಢ ಸ್ಥಿತಿಯಲ್ಲಿರುವುದು ಆಗ ಕರ್ತವ್ಯವಾಗುತ್ತದೆ.ನಮ್ಮಭಾವನಾತ್ಮಕ ಆಂತರಿಕ ಚೈತನ್ಯ ವೃದ್ಧಿಯಾದಾಗ ದೇಶ ಬಾಳಿ ಬೆಳಗಿ ದೃಢವಾಗುತ್ತದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಭಿಪ್ರಾಯಪಟ್ಟರು.
ಅವರು ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕುರಿತು ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ದಿಕ್ಸೂಚಿ ಮಾತನ್ನಾಡಿದರು.
ಅಷ್ಟಬಂಧ ಬ್ರಹ್ಮ ಕಲಶೋತ್ಸವದ ದಿನಾಂಕ ಘೋಷಣಾ ಫಲಕದ ಶಿವಾರ್ಪಣೆ ಹಾಗೂ ಮನವಿ ಪತ್ರವನ್ನು ಲೋಕಾರ್ಪಣೆ ಮಾಡಿದರು. ವೇದಿಕೆಯಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ವೈ.ಸುಬ್ರಾಯ ಭಟ್, ಗೌರವ ಉಪಾಧ್ಯಕ್ಷ ವೈ.ಶಂಕರ ಭಟ್, ಅಧ್ಯಕ್ಷರು ಮತ್ತು ಆಡಳಿತ ಮೊಕ್ತೇಸರ ವೈ.ಶಾಮ ಭಟ್, ಮೋಕ್ತೇಸರಲೊಬ್ಬರಾದ ವೈ.ವಿ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ವೈ.ಶಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಬರ್ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕರಲ್ಲೊಬ್ಬರಾದ ಮೇಘಾ ಏತಡ್ಕ ಶುಭಾಶಂಸನೆಗೈದರು.
ಕು.ಜಾಹ್ನವಿ ಆನೆಪ್ಪಳ್ಳ ಹಾಗೂ ಕು.ರಮ್ಯ ಆನೆಪ್ಪಳ್ಳ ಪ್ರಾರ್ಥನೆಗೈದರು.ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.ಡಾ.ವೈ.ವಿ.ಕೃಷ್ಣಮೂರ್ತಿ ವಂದಿಸಿದರು.