ಮುಂಬೈ: ದೇಶದ ಡಿಜಿಟಲ್ ಅರ್ಥ ವ್ಯವಸ್ಥೆಯು 2026ರ ವೇಳೆಗೆ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಐದನೆಯ ಒಂದರಷ್ಟು ಆಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ವರದಿಯೊಂದು ಹೇಳಿದೆ. ಈಗ ಡಿಜಿಟಲ್ ಅರ್ಥ ವ್ಯವಸ್ಥೆಯ ಪಾಲು ಒಟ್ಟು ಜಿಡಿಪಿಯ ಹತ್ತನೆಯ ಒಂದರಷ್ಟು ಮಾತ್ರ ಇದೆ.

'2023-24ನೆಯ ಸಾಲಿನ ಕರೆನ್ಸಿ ಮತ್ತು ಹಣಕಾಸಿನ ಕುರಿತ ವರದಿ' ಹೆಸರಿನ ವರದಿಗೆ ಬರೆದಿರುವ ಮುನ್ನುಡಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಹಣಕಾಸಿನ ಡಿಜಿಟಲೀಕರಣವು ಮುಂದಿನ ತಲೆಮಾರಿನ ಬ್ಯಾಂಕಿಂಗ್ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತಿದೆ, ಹಣಕಾಸು ಸೇವೆಗಳು ಕೈಗೆಟಕುವ ವೆಚ್ಚಕ್ಕೆ ಸಿಗುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಪರಿವರ್ತನೆಗೆ ಹಲವು ಅಂಶಗಳು ನೆರವಾಗುತ್ತಿವೆ. ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣವು ಈಚಿನ ಮೂರು ವರ್ಷಗಳಲ್ಲಿ 19.9 ಕೋಟಿಯಷ್ಟು ಹೆಚ್ಚಾಗಿದೆ. ಭಾರತದಲ್ಲಿ ಪ್ರತಿ ಗೀಗಾಬೈಟ್ ಡೇಟಾ ಪಡೆಯಲು ಮಾಡಬೇಕಿರುವ ವೆಚ್ಚ ₹13.32 ಮಾತ್ರ, ಇದು ಜಗತ್ತಿನಲ್ಲಿ ಅತ್ಯಂತ ಕಡಿಮೆ ಮೊತ್ತ. ದೇಶದಲ್ಲಿ ಪ್ರತಿ ವ್ಯಕ್ತಿ ತಿಂಗಳಿಗೆ ಬಳಕೆ ಮಾಡುವ ಸರಾಸರಿ ಡೇಟಾ ಪ್ರಮಾಣ 24.1 ಜಿ.ಬಿಯಷ್ಟು ಇದೆ ಎಂದು ವರದಿ ಹೇಳಿದೆ.
ಡಿಜಿಟಲೀಕರಣವು ಸೈಬರ್ ಭದ್ರತೆ, ದತ್ತಾಂಶ ಸುರಕ್ಷತೆ ಸೇರಿದಂತೆ ಹಲವು ಆಯಾಮಗಳಲ್ಲಿ ಸವಾಲುಗಳನ್ನು ಕೂಡ ಒಡ್ಡಿದೆ ಎಂದು ದಾಸ್ ಅವರು ಹೇಳಿದ್ದಾರೆ.