ತಿರುವನಂತಪುರಂ: ಕೇಂದ್ರ ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕ ಕಡಿತಗೊಳಿಸಿದ ನಂತರ ಕೇರಳದಲ್ಲಿ ಚಿನ್ನದ ಬೆಲೆ ಕುಸಿದಿದೆ. ಕನಿಷ್ಠ ೨೦೦೦ ರೂ. (ಗ್ರಾಮ್‌ಗೆ ೨೫೦ ರೂ.).ಕಡಮೆಯಾಗಿದೆ.
ಇದರೊಂದಿಗೆ ರಾಜ್ಯದಲ್ಲಿ ಒಂದು ಗ್ರಾಂ ಚಿನ್ನ ೬,೪೯೫ ರೂ.ಗೆ ಮತ್ತು ಪವನ್ ೫೧,೯೬೦ ರೂ.ಗೆ ಇಳಿಕೆಯಾಗಿದೆ.
ಪವನ್ ೨೦೦೦ ರೂ.ಗಳಷ್ಟು ಕುಸಿತದೊಂದಿಗೆ ಚಿನ್ನದ ಬೆಲೆ ಈ ತಿಂಗಳ ಕನಿಷ್ಠ ಮಟ್ಟವನ್ನು ತಲುಪಿತು. ಈ ತಿಂಗಳ ಹಿಂದಿನ ಕಡಮೆ ಬೆಲೆಯು ಜುಲೈ ೧ ರಂದು ಪವನ್‌ಗೆ ೫೩,೦೦೦ ರೂ.ದಾಖಲಾಗಿತ್ತು.
ಬಜೆಟ್ ಘೋಷಯಲ್ಲಿ, ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ ೬ ಕ್ಕೆ ಇಳಿಸಲಾಗಿದೆ. ಇದರೊಂದಿಗೆ ಮೊಬೈಲ್ ಪೋನ್ ಮೇಲಿನ ಸುಂಕವನ್ನೂ ಕಡಿತಗೊಳಿಸಲಾಗಿದೆ.