ಕಾಸರಗೋಡು : ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೋಟಿ ಪಂಚಾಕ್ಷರಿ ಜಪ ಯಜ್ಞ ಹಾಗೂ ಶ್ರೀಚಕ್ರ ಪೂಜೆ 2024ರ ಡಿಸೆಂಬರ್ 16ರಿಂದ 19 ರವರೆಗೆ ಜರುಗಲಿದೆ. ಕಾರ್ಯಕ್ರಮವು ಶ್ರೀ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹಾಗೂ ಕೊಂಡೆವೂರು ಮಠಾಧೀಶರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಶುಭಾಶೀರ್ವಾದದೊಂದಿಗೆ ಶ್ರೀ ಕ್ಷೇತ್ರದ ತಂತ್ರಿ ವರ್ಯರಾದ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ ಯವರ ನೇತೃತ್ವದಲ್ಲಿ ಜರಗಲಿದೆ
10,000 ಭಕ್ತಾದಿಗಳು ಸಾವಿರ ಬಾರಿ ಕೋಟಿ ಪಂಚಾಕ್ಷರಿ ಜಪ ಪಠಿಸುವ ಯಜ್ಞದೊಂದಿಗೆ ಶ್ರೀಚಕ್ರ ಪೂಜೆಯು ನಡೆಯಲಿರುವುದು. ಕಾರ್ಯಕ್ರಮದ ಯಶಸ್ವಿಗಾಗಿ ಸಮಿತಿ ರಚನಾ ಸಭೆ ದೇವಸ್ಥಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ ಯವರು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಟ್ರಸ್ಟಿಬೋರ್ಡ್ ಅಧ್ಯಕ್ಷ, ವಕೀಲ ಗೋವಿಂದ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರವೀಶ ತಂತ್ರಿ ಕುಂಟಾರು, ಟ್ರಸ್ಟಿಬೋಡ್ ಸದಸ್ಯರಾದ ಕೆ ರಾಮಪ್ರಸಾದ, ಉಷಾ ಎಸ್, ಉಮೇಶ್ ಅಣಂಗೂರ್, ಮನೋಜ್ ಎ.ಸಿ ಶ್ರೀ ಕ್ಷೇತ್ರ ಕಾರ್ಯ ನಿರ್ವಹಣಾಧಿಕಾರಿ ರಾಜೇಶ್, ಶ್ರೀ ಕ್ಷೇತ್ರ ಜೀರ್ಣೋದ್ದಾರ ಸಮಿತಿಯ ಮಾಜಿ ಅಧ್ಯಕ್ಷ ಡಾ ಅನಂತ ಕಾಮತ್, ಮಾಜಿ ಕಾರ್ಯದರ್ಶಿ ವಕೀಲ ಮುರಳಿದರನ್ ಹಾಗೂ ಸಿವಿ ಪೆÇದುವಾಲ್ ಉಪಸ್ಥಿತರಿದ್ದರು.
ಶ್ರೀ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹಾಗೂ ಕೊಂಡೆವೂರು ಮಠಾಧೀಶರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೋಟಿ ಪಂಚಾಕ್ಷರಿ ಜಪ ಯಜ್ಞ ಸಮಿತಿಯ ಮುಖ್ಯ ರಕ್ಷಾಧಿಕಾರಿಗಳಾಗಿದ್ದಾರೆ.
ಯಜ್ಞ ಸಮಿತಿಯ ಅಧ್ಯಕ್ಷರಾಗಿ ಡಾ. ಅನಂತ ಕಾಮತ್, ಕಾರ್ಯಾಧ್ಯಕ್ಷರಾಗಿ ಕೆ ರಾಮಪ್ರಸಾದ್ ಹಾಗೂ ಕೆ ಎನ್ ವೆಂಕಟರಮಣ ಹೊಳ್ಳ, ಕಾರ್ಯದರ್ಶಿಯಾಗಿ ಕೆ ಹರೀಶ್ ಪೂಜಾರಿ ಹಾಗೂ ಕೋಶಾಧಿಕಾರಿಯಾಗಿ ಕ್ಷೇತ್ರ ನಿರ್ವಹಣಾಧಿಕಾರಿ ರಾಜೇಶ್ ಅವರನ್ನು ಆಯ್ಕೆ ಮಾಡಲಾಯಿತು.