ತಿರುವನಂತಪುರಂ: ವಿಜಿಂಜಂ ಬಂದರಿಗೆ ಮೊದಲ ಮದರ್ ಶಿಪ್ ಶುಕ್ರವಾರ ಆಗಮಿಸಲಿದೆ ಎಂದು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ.
ದೇಶದ ಮೊದಲ ಸ್ವಯಂಚಾಲಿತ ಟ್ರಾನ್ಸ್‍ಶಿಪ್‍ಮೆಂಟ್ ಪೋರ್ಟ್ ವಿಜಿಂಜಂನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.
ವಿಝಿಂಜಂ ಅಂತರಾಷ್ಟ್ರೀಯ ಸರಕು ಸಾಗಣೆಯ ಪ್ರಮುಖ ಕೇಂದ್ರವಾಗುತ್ತಿದೆ. ವಿಝಿಂಜಂ ಒಂದು ದೊಡ್ಡ ಬಂದರು ಆಗಿದ್ದು ಅದು ವರ್ಷಕ್ಕೆ ಒಂದು ಮಿಲಿಯನ್ ಕಂಟೇನರ್‍ಗಳನ್ನು ನಿಭಾಯಿಸಬಲ್ಲದು. ವಿಝಿಂಜಂ ಬಂದರು ರಾಜ್ಯದ ಚಹರೆ ಬದಲಿಸಬಲ್ಲದು ಎಂದು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿರುವರು.
2000 ಕ್ಕೂ ಹೆಚ್ಚು ಕಂಟೈನರ್‍ಗಳೊಂದಿಗೆ ವಿಝಿಂಜಂ ತಲುಪುವ ಮೊದಲ ಹಡಗು ವಿಶ್ವದ ಎರಡನೇ ಅತಿದೊಡ್ಡ ಸರಕು ಹಡಗು. ಈ ಹಡಗು 400 ಮೀಟರ್‍ಗಿಂತಲೂ ಹೆಚ್ಚು ಉದ್ದವಿರುತ್ತದೆ. ಹಡಗು ಚೀನಾದಿಂದ ಹೊರಟು ಕೊಲಂಬೊ ಮೂಲಕ ವಿಝಿಂಜಂ ತಲುಪಲಿದೆ. ಹಡಗಿನ ಸಂಪೂರ್ಣ ಸರಕುಗಳನ್ನು ಇಳಿಸಲಾಗುವುದು ಎಂದು ವರದಿಯಾಗಿದೆ.
ದೇಶದ ಆಳವಾದ ಟ್ರಾನ್ಸ್‍ಶಿಪ್‍ಮೆಂಟ್ ಹಬ್ ಆಗಿರುವ ವಿಝಿಂಜಂ, ವಿಶ್ವದ ಅತಿದೊಡ್ಡ ಮದರ್‍ಶಿಪ್‍ಗಳನ್ನು ಒಟ್ಟುಗೂಡಿಸುತ್ತದೆ. ಬೇರೆ ದೇಶಗಳಿಗೂ ರವಾನಿಸಬಹುದು. ಅದರೊಂದಿಗೆ ವಿಝಿಂಜಂ ಜಾಗತಿಕ ಟ್ರಾನ್ಸ್‍ಶಿಪ್‍ಮೆಂಟ್ ಹಬ್ ಆಗಿ ಬೆಳೆಯಲಿದೆ. ವಿಝಿಂಜಂ ಯುರೋಪ್, ಗಲ್ಫ್, ಪೂರ್ವ ಏμÁ್ಯ ದೇಶಗಳು ಇತ್ಯಾದಿಗಳನ್ನು ಸಂಪರ್ಕಿಸುವ ಅಂತರಾಷ್ಟ್ರೀಯ ಹಡಗು ಮಾರ್ಗಗಳಿಂದ 10 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ.
ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ ಸಾಪ್ಟ್ ವೇರ್‍ನಲ್ಲಿ ಚಾಲನೆಯಲ್ಲಿರುವ ಪೋರ್ಟ್ ನ್ಯಾವಿಗೇಷನ್ ಸೆಂಟರ್‍ನಿಂದ ವಿಜಿಂಜಂನಲ್ಲಿರುವ ಹಡಗುಗಳನ್ನು ನಿಯಂತ್ರಿಸಲಾಗುತ್ತದೆ. ಸ್ವಯಂಚಾಲಿತ ನ್ಯಾವಿಗೇಷನ್ ಸೆಂಟರ್ ಏರ್ ಟ್ರಾಫಿಕ್ ಕಂಟ್ರೋಲ್ ಮಾದರಿಯಲ್ಲಿದೆ.