ಕುಂಬಳೆ: ರಸ್ತೆ ಬದಿ ಬೆಳೆದು ನಿಂತ ಕುರುಚಲು ಪೊದರುಗಳನ್ನು ಕಿದೂರು ಕುಂಟAಗೇರಡ್ಕದ ಯಸ್.ಕೆ.ಪಿ.ಫ್ರೆಂಡ್ಸ್ ಕ್ಲಬ್ ವತಿಯಿಂದ ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು. ಕಿದೂರು ಶ್ರೀ ಮಹಾದೇವ ದೇವಸ್ಥಾನಕ್ಕೆ ತೆರಳುವ ಜೋಡುಕಟ್ಟೆ ಕಿದೂರು ರಸ್ತೆಯ ಎರಡೂ ಬದಿ ವಾಹನ ಹಾಗೂ ಜನಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಗಿಡಗಂಟಿಗಳನ್ನು ಕ್ಲಬ್ಬಿನ ಸದಸ್ಯರು ಬೆಳಗ್ಗಿನಿಂದ ಮಧ್ಯಾಹ್ನವರೆಗೆ ಕೆಲಸ ನಿರ್ವಹಿಸುವ ಮೂಲಕ ಶುಚಿಗೊಳಿಸಿದರು. ಕ್ಲಬ್ ಸದಸ್ಯರಾದ ಜಯಪ್ರಕಾಶ್, ದಿನೇಶ್,ಪ್ರಮೋದ್, ಜಯರಾಜ್ ವರ್ಕಾಡಿ, ಥಾಮಸ್ ಕ್ರಾಸ್ತ, ಪದ್ಮನಾಭ ಕಾರ್ತಿಗೋಳಿ, ಶಿವಕಾಂತ ಹಾಗೂ ಕುಂಬಳೆ ಗ್ರಾಮ ಪಂಚಾಯಿತಿ ಸದಸ್ಯರಾದ ರವಿರಾಜ್ ಮೊದಲಾದವರು ಸಹಕರಿಸಿದರು.