ಕಾಸರಗೋಡು: ಕಾರವಾರ ಸನಿಹದ ಶಿರೂರಿನಲ್ಲಿ ಭಾರೀ ಭೂಕುಸಿತದಿಂದ ಮಣ್ಣಿನೊಂದಿಗೆ ಕೊಚ್ಚಿಹೋಗಿರುವ ಲಾರಿಯ ಇರುವಿಕೆ ಪತ್ತೆಹಚ್ಚುವಲ್ಲಿ ಕಾಸರಗೋಡು ಕಯ್ಯೂರು ನಿವಾಸಿ, ಸುರತ್ಕಲ್ ಎನ್‌ಐಟಿಕೆ ಅಸೋಸಿಯೇಟ್ ಪ್ರೊಫೆಸರ್ ಡಾ. ಶ್ರೀವತ್ಸ ಕೊಳತ್ತಾಯ ಪ್ರಮುಖ ಪಾತ್ರ ವಹಿಸಿದ್ದಾರೆ.
ಭೂಕುಸಿತದಿಂದ ಕಲ್ಲು, ಮಣ್ಣು ತುಂಬಿಕೊಂಡಿದ್ದ ಪ್ರದೇಶವನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಿ, ಲಾರಿಯ ಇರುವಿಕೆಯನ್ನು ಡಾ. ಶ್ರೀವತ್ಸ ಪತ್ತಹಚ್ಚಿದ್ದಾರೆ. ರಾಷ್ಟ್ರೀಯ ವಿಪತ್ತು ನಿವಾರಣಾ ಪ್ರಾಧಿಕಾರದ ಕೇಳಿಕೆ ಮೇರೆಗೆ ಡಾ. ಶ್ರೀವತ್ಸ ಅವರು ಶಿರೂರಿಗೆ ತಲುಪಿದ್ದರು. ಕಳೆದ ವರ್ಷ ಕಾಸರಗೋಡು ಪೆರಿಯಾದಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ಸಂದರ್ಭ ಮೇಲ್ಸೇತುವೆ ಕುಸಿದ ಪ್ರಕರಣದಲ್ಲಿ ಸಮಗ್ರ ತನಿಖೆಗಾಗಿ ನೇಮಿಸಿದ ತಂಡದಲ್ಲೂ ಡಾ. ಶ್ರೀವತ್ಸ ಕೊಳತ್ತಾಯ ಸ್ಥಾನ ಪಡೆದಿದ್ದರು. ಡಾ. ಶ್ರೀವತ್ಸ ಅವರು ೮೦ಕ್ಕೂ ಹೆಚ್ಷಚು ಸಂಶೋಧನಾ ಲೇಖನಗಳನ್ನು ಬರೆದಿದ್ದು, ಪ್ರಮುಖ ಮ್ಯಾಗಸಿನ್‌ಗಳಲ್ಲಿ ಪ್ರಕಟಗೊಂಡಿದೆ.