ಕಾಸರಗೋಡು : ತಾಲೂಕು ಜನಜಾಗೃತಿ ವೇದಿಕೆಯ ಪ್ರಥಮ ತ್ರೈಮಾಸಿಕದ ಪ್ರಗತಿ ಪರಿಶೀಲನಾ ಸಭೆಯು ಕಾಸರಗೋಡು ವಲಯದ ಕೂಡ್ಲು ವನಿತಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಜರುಗಿತು. ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ, ನಿರ್ದೇಶಕ ಪ್ರವೀಣ್ ಕುಮಾರ್ ಜನಜಾಗೃತಿ ಮತ್ತು ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿ, ವಲಯ ಮಟ್ಟದಲ್ಲಿ ಜನಜಾಗೃತಿ ವೇದಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ವಲಯದಲ್ಲಿ ಪ್ರಸ್ತುತ ಇರುವ ಪದಾಧಿಕಾರಿಗಳು ಸೇರಿದಂತೆ ಕನಿಷ್ಠ ಒಬ್ಬರು ಮಹಿಳಾ ಪದಾಧಿಕಾರಿಯವರನ್ನು ಸೇರಿದಂತೆ ಕನಿಷ್ಠ 6 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಬಗ್ಗೆ ಬಗ್ಗೆ ಮಾಹಿತಿ ನೀಡಿದರು.
ವಾಮನ ಆಚಾರ್ಯ, ಶರೀಫ್ ಕೊಡವಂಜಿ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಐದು ವಲಯಗಳ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರುಗಳು ಹಾಗೂ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಜನಜಾಗೃತಿ ಬದಿಯಡ್ಕ ವಲಯದ ಸದಸ್ಯರೂ ಆದ ಯಕ್ಷಗಾನ ಗುರು ಜಯರಾಮ ಪಾಟಾಳಿ ಪಡುಮಲೆ ಅವರ 50ನೇ ವರ್ಷದ 'ಜಯರಾಮ ಸುವರ್ಣ ಸಂಭ್ರಮ' ಎಂಬ ಕಾರ್ಯಕ್ರಮದ ಪೂರ್ವ ಭಾವಿ ಸಮಿತಿ ರಚನಾ ಸಭೆ ಜುಲೈ 14ರಂದು ಬದಿಯಡ್ಕ ಗುರುಸದನದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.
ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಕಿರುಚಿತ್ರ ನಿರ್ಮಿಸಿದ ಮಧುಸೂದನ ( ಪರ್ಯಾಪ್ತ, ಕನ್ನಡ ಕಿರು ಚಿತ್ರ) ಮತ್ತು ಡೋನ್ ಮರಿಯ ( ಅತಿನಾಲ್, ಮಲಯಾಳಂ ಕಿರು ಚಿತ್ರ) ಅವರನ್ನು ಮತ್ತು ಅವರ ತಂಡವನ್ನು ಜನ ಜಾಗೃತಿ ತಾಲೂಕು ವಲಯದ ತ್ರೈಮಾಸಿಕ ಸಭೆಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಬದಿಯಡ್ಕ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಸ್ವಾಗತಿಸಿದರು. ಜಿಲ್ಲಾ ಯೋಜನಾಧಿಕಾರಿ ಮುಖೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರಡ್ಕ ವಲಯ ಮೇಲ್ವಿಚಾರಕ ಅನಿಲ್ ವಂದಿಸಿದರು.