ಪ್ರಕೃತಿಯ ಮೇಲೆ ಮಾನವನ ಪ್ರಭಾವ ಕಣ್ಣೀರು ಸುರಿಯುವ ಮಳೆಯಲ್ಲಿ ಕಣ್ಮರೆಯಾಯಿತು.
ಹಳ್ಳಿಯೊಂದು ಕ್ಷಣಾರ್ಧದಲ್ಲಿ ಕಣ್ಮರೆಯಾಯಿತು. ಕೇರಳ ಮಳೆ, ಭೂಕುಸಿತದಿಂದ ತತ್ತರಿಸುತ್ತಿರುವಾಗ ಮತ್ತೆ ಕೇಳಿ ಬರುತ್ತಿರುವ ಹೆಸರು ಮಾಧವ್ ಗಾಡ್ಗೀಳ್. ಪಶ್ಚಿಮ ಘಟ್ಟಗಳು ನಾಶವಾಗಿದ್ದು, ಕೇರಳಕ್ಕೆ ಭಾರೀ ಅನಾಹುತಗಳು ಕಾದಿವೆ ಎಂದು ಖ್ಯಾತ ವಿಜ್ಞಾನಿ ಹೇಳಿದ್ದ ಎಚ್ಚರಿಕೆಯ ನುಡಿಗಳು ಇದೀಗ ಚರ್ಚೆಯಲ್ಲಿವೆೆ.
ಅತಿ ಹೆಚ್ಚು ಪರಿಸರ ಸೂಕ್ಷ್ಮ ಪ್ರದೇಶಗಳÀ ರಕ್ಷಣೆ ಎಷ್ಟಿದೆ, ಗಾಡ್ಗೀಳ್ ವರದಿ ಜಾರಿಯಾಗಿದ್ದರೆ ತಡೆಯಬಹುದಾಗಿದ್ದ ಅನಾಹುತಗಳು ನಮ್ಮ ಮುಂದೆ ಪ್ರತ್ಯಕ್ಷವಾಗುತ್ತಿತ್ತೇ ಎಂಬ ಪ್ರಶ್ನೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. ೮೨ ವರ್ಷದ ಮಾಧವ್ ಧನಂಜಯ ಗಾಡ್ಗೀಳ್ ಅವರು ಪರಿಸರ ಕ್ಷೇತ್ರದಲ್ಲಿ ವಿಶ್ವದ ಗೌರವಾನ್ವಿತ ತಜ್ಞರಲ್ಲಿ ಒಬ್ಬರು.
೧೯೪೨ ರಲ್ಲಿ ಪುಣೆಯಲ್ಲಿ ಸಹ್ಯಾದ್ರಿಯ ಮಡಿಲಲ್ಲಿ ಜನಿಸಿದ ಗಾಡ್ಗೀಳ್ ಅವರ ಜೀವನವು ಪಶ್ಚಿಮ ಘಟ್ಟಗಳಲ್ಲಿ ಅಧ್ಯಯನ ಮತ್ತು ಚಟುವಟಿಕೆಗಳಿಗೆ ಮೀಸಲಾಗಿತ್ತು. ‘‘ಪಶ್ಚಿಮ ಘಟ್ಟಗಳು ಸಂಪೂರ್ಣ ನಾಶವಾಗುತ್ತಿವೆ. ಇನ್ನಾದರೂ ಕ್ರಮ ಕೈಗೊಳ್ಳದಿದ್ದರೆ ಕೇರಳಕ್ಕೆ ದೊಡ್ಡ ಅನಾಹುತ ಕಾದಿದೆ. ನೀವು ಯೋಚಿಸುವಂತೆ ಇದು ಕಾಲಾಂತರಗಳ ಬಳಿಕ ಸಂಭವಿಸುವುದಲ್ಲ. ನಾಲ್ಕೈದು ವರ್ಷ ಸಾಕು. ನಂತರ ನೀವು ಮತ್ತು ನಾನು ಒಬ್ಬರನ್ನೊಬ್ಬರು ಜೀವಂತವಾಗಿ ನೋಡುತ್ತೇವೆಯೋ. ಯಾರು ಸುಳ್ಳು ಹೇಳುತ್ತಿದ್ದಾರೆ, ಯಾರು ಬೆದರಿಕೆಗಳಾಗಿದ್ದಾರೆ ಎಂಬುದು ನಿಮಗೆ ಅರ್ಥವಾಗುತ್ತದೆ.'- ಮಾಧವ್ ಗಾಡ್ಗೀಳ್ ಅವರು ೨೦೧೩ರಲ್ಲಿ ಹಂಚಿಕೊAಡ ವಿಷಯಗಳು ಇವು.
ಇದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿರುವ ಆತಂಕ. ಒಮ್ಮೆ ನಾವು ಮಾಧವ್ ಗಾಡ್ಗೀಳ್ ಅವರನ್ನು ಅಣಕಿಸಿದ್ದೆವು. ಇಂದು ಸಮಯ ಹೇಳುತ್ತಿದೆ, ಗಾಡ್ಗೀಳ್ ಕಲ್ಪನೆ ಸರಿಯಾಗಿದೆ ಎಂಬುದನ್ನ್ತು!' ಎಂಬ ಶೀರ್ಷಿಕೆಯೊಂದಿಗೆ ಅನೇಕರು ಅವರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
‘ಕ್ವಾರಿಗಳಿದ್ದರೂ ಮಳೆಯಾಗಿದೆ’ ಎಂದು ಶಾಸಕ ಥಾಮಸ್ ಚಾಂಡಿ ಬರೆದಿದ್ದಾರೆ. ಶಾಸಕ ಪಿ.ವಿ.ಅನ್ವರ್ ಸಹ 'ಪ್ರಕೃತಿಯ ನಿಯಮವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಶಾಸಕ ಎಸ್.ರಾಜೇಂದ್ರನ್ ಅವರು ನಿಯಮ ಸಡಿಲಿಸಬೇಕು ಎಂದಿರುವರು. ಇಡುಕ್ಕಿ ಮಾಜಿ ಸಂಸದ ಜೋಯ್ಸ್ ಜಾರ್ಜ್ ಕೂಡ ‘ಆಪತ್ಕಾಲದ ರಣಹದ್ದು ಮಾಧವ್ ಗಾಡ್ಗೀಳ್’ ಎಂದು ಹೇಳಿದಾಗ ಆ ಬರಡು ಮುದುಕ ಮೌನವಾದರು. ಕಾಲವೇ ಉತ್ತರಿಸುತ್ತದೆ ಎಂಬ ನಂಬಿಕೆಯೊAದಿಗೆ. ಹೌದು, ಇಂದು ಪ್ರಕೃತಿ ಅದಕ್ಕೆ ಉತ್ತರ ನೀಡಿದೆ.