HEALTH TIPS

ನೀಟ್‌: ಹೆಚ್ಚಿನ ಸಾಧಕರು ಸಾಂಪ್ರದಾಯಿಕವಲ್ಲದ ಟ್ಯೂಷನ್‌ ತಾಣದವರು

 ವದೆಹಲಿ: ಪ್ರಸಕ್ತ ಸಾಲಿನ 'ನೀಟ್‌-ಯುಜಿ' ಪರೀಕ್ಷೆ ಬರೆದವರಲ್ಲಿ 2,321 ಅಭ್ಯರ್ಥಿಗಳು ಒಟ್ಟು 720 ಅಂಕಗಳಿಗೆ 700ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರು ದೇಶದ 1,404 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದು, ಬಹುತೇಕರು 'ಸಾಂಪ್ರದಾಯಿಕವಲ್ಲದ ಟ್ಯೂಷನ್‌ ತಾಣ'ಗಳಿಗೆ ಸೇರಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷದ ವೈದ್ಯಕೀಯ ಪ್ರವೇಶ ಪರೀಕ್ಷೆಗೆ 23.33 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. 700ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು 25 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 276 ನಗರಗಳಿಗೆ ಸೇರಿದವರಾಗಿದ್ದಾರೆ.

ಸಾಂಪ್ರದಾಯಿಕ ಟ್ಯೂಷನ್‌ ತಾಣಗಳಾದ ಸಿಕರ್‌, ಕೋಟಾ ಮತ್ತು ಕೊಟ್ಟಾಯಂನ ಅನೇಕ ಪರೀಕ್ಷಾರ್ಥಿಗಳು 700ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ ಎಂಬುದು ನಿಜ. ಆದರೆ, ದೇಶದ ಇತರ ನಗರಗಳ ಅನೇಕ ಅಭ್ಯರ್ಥಿಗಳೂ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಾಗಿದೆ. ನೀಟ್‌ ಪಠ್ಯಕ್ರಮವನ್ನು ಹಿರಿಯ ಮಾಧ್ಯಮಿಕ ಪಠ್ಯದೊಂದಿಗೆ ಸಂಯೋಜಿಸಿರುವುದು ಫಲ ನೀಡಲು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಉದಾಹರಣೆಗೆ, ಲಖನೌದಲ್ಲಿ ಪರೀಕ್ಷೆ ಬರೆದ 35 ಅಭ್ಯರ್ಥಿಗಳು, ಕೋಲ್ಕತ್ತದ 27, ಲಾಥೂರ್‌ನ 25, ನಾಗ್ಪುರದ 20, ಫರಿದಾಬಾದ್‌ನ 19, ನಾಂದೆಡ್‌ನ 18, ಇಂದೋರ್‌ನ 17, ಕಟಕ್‌ ಮತ್ತು ಕಾನ್ಪುರದ ತಲಾ 16, ಕೊಲ್ಹಾಪುರ, ನೋಯ್ಡಾ, ಸಾಹಿಬ್ಜಾದಾ ಅಜಿತ್ ಸಿಂಗ್ ನಗರಗಳ ತಲಾ 14, ಆಗ್ರಾ, ಅಲಿಗಢದ ತಲಾ 13, ಅಕೋಲಾ, ಪಟಿಯಾಲಾದ ತಲಾ 10, ದಾವಣಗೆರೆಯ ಎಂಟು, ಬನಸ್ಕಾಂತದ ಏಳು ಅಭ್ಯರ್ಥಿಗಳು 700 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಗಣನೀಯ ಸಾಧನೆ ಮಾಡಿದ್ದಾರೆ.

650ರಿಂದ 699 ಅಂಕಗಳನ್ನು ಪಡೆದವರು 509 ನಗರಗಳ 4,044 ಕೇಂದ್ರಗಳಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ. 600ರಿಂದ 649 ಅಂಕಗಳನ್ನು ಪಡೆದವರು 540 ನಗರಗಳ 4,484 ಕೇಂದ್ರಗಳಲ್ಲಿ ಹಾಗೂ 550ರಿಂದ 599 ಅಂಕಗಳನ್ನು ಪಡೆದವರು 548 ನಗರಗಳ 4,563 ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾದವರಾಗಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.

ಅದೇ ರೀತಿ ಶ್ರೇಣಿವಾರು ಫಲಿತಾಂಶವು ದೇಶದ ವಿವಿಧ ನಗರ, ಕೇಂದ್ರಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.

ರ್‍ಯಾಂಕ್‌ವಾರು ವಿಶ್ಲೇಷಣೆ 1ರಿಂದ 100 ರ್‍ಯಾಂಕ್‌ ಪಡೆದವರು 56 ನಗರಗಳ 95 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. 101ರಿಂದ 1000 ರ್‍ಯಾಂಕ್‌ ಪಡೆದವರು 187 ನಗರಗಳ 706 ಕೇಂದ್ರಗಳಲ್ಲಿ 1001ರಿಂದ 10000 ರ್‍ಯಾಂಕ್‌ ಪಡೆದವರು 431 ನಗರಗಳ 2959 ಕೇಂದ್ರಗಳಿಂದ 10001ರಿಂದ 50000 ರ್‍ಯಾಂಕ್‌ಗಳನ್ನು ಪಡೆದವರು 523 ನಗರಗಳ 4283 ಕೇಂದ್ರಗಳಿಂದ ಹಾಗೂ 50001ರಿಂದ 110000 ರ್‍ಯಾಂಕ್‌ಗಳನ್ನು ಪಡೆದವರು 539 ನಗರಗಳ 4470 ಕೇಂದ್ರಗಳಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ ಎಂದು ದತ್ತಾಂಶಗಳಿಂದ ತಿಳಿದು ಬರುತ್ತದೆ. ರಾಜಸ್ಥಾನದ ಸಿಕರ್‌ನ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆದವರ ಪೈಕಿ 2000 ಅಭ್ಯರ್ಥಿಗಳು 650ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೆ 4000ಕ್ಕೂ ಹೆಚ್ಚು ಅಭ್ಯರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಕಳೆದ ಸಾಲಿಗಿಂತ ಈ ಬಾರಿ ಹೆಚ್ಚು ಅಭ್ಯರ್ಥಿಗಳು ಹೆಚ್ಚು ಅಂಕಗಳನ್ನು ಪಡೆದಿದ್ದು ವಿವಿಧ ಕೇಂದ್ರ ಮತ್ತು ನಗರಗಳನ್ನು ಪ್ರತಿನಿಧಿಸಿದ್ದಾರೆ. ನೀಟ್‌-2023ರಲ್ಲಿ 700ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದವರು 116 ನಗರಗಳ 310 ಕೇಂದ್ರಗಳ ಅಭ್ಯರ್ಥಿಗಳಾಗಿದ್ದರು. 659ರಿಂದ 699ರ ನಡುವೆ ಅಂಕಗಳನ್ನು ಪಡೆದಿದ್ದವರು 381 ನಗರಗಳ 2431 ಕೇಂದ್ರಗಳಲ್ಲಿ ಪರೀಕ್ಷೆ ಬರೆದವರಾಗಿದ್ದರೆ 600ರಿಂದ 649 ಅಂಕಗಳನ್ನು ಪಡೆದಿದ್ದವರು 464 ನಗರಗಳ 3434 ಕೇಂದ್ರಗಳಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries