ಕಾಸರಗೋಡು : ಬೂತ್ ಮಟ್ಟದ ಮುಖಂಡರನ್ನು ಆಯ್ಕೆಮಡಿ, ಅವರೊಂದಿಗೆ ರಾಜ್ಯಮಟ್ಟದ ಮುಖಂಡರು ನೇರವಾಗಿ ವ್ಯವಹರಿಸುವ ಮೂಲಕ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯಗಳು ಅನಾರಣಗೊಳ್ಳಲು ಸಾಧ್ಯವಾಗುವುದಾಗಿ ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ತಿಳಿಸಿದ್ದಾರೆ.
ಅವರು ಕಾಸರಗೋಡು ಮಂಡಲ ಸಮಿತಿ ಯುವ ಭಾರತ ಬೂತ್ ಮಟ್ಟದ ನಾಯಕರ ನಾಯಕತ್ವ ಸಭೆ ಉದ್ಘಾಟಿಸಿ ಮಾತನಾಡಿದರು.
ಯುವ ಕಾಂಗ್ರೆಸ್ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಅಬಿದ್ ಎಡಚೇರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಘಟನೆ ರಾಜ್ಯಾಧ್ಯಕ್ಷ ರಾಹುಲ್ ಮಾಂಕೂಟ್ಟತ್ತಿಲ್ ನೇತೃತ್ವದ ರಾಜ್ಯ ಮುಖಂಡರು ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಎಐಸಿಸಿ ಸಂಯೋಜಕ ಮನಾಫ್ ನುಳ್ಳಿಪಾಡಿ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಬಿನ್ ವರ್ಕಿ, ಶಿಬಿನಾ ವಿ.ಕೆ, ಓ.ಜೆ.ಜನೀಶ್, ಅನುತಾಜ್, ಯುವ ಕಾಂಗ್ರೆಸ್ ರಾಜ್ಯ ಪದಾಧಿಕಾರಿಗಳಾದ ಜೋಮೋನ್ ಜೋಸ್, ಅಬ್ದುಲ್ ರಶೀದ್, ಮಿಥುನ್ ಮೋಹನ್, ವೈಶಾಖ್, ಲಿಯೋನೆಲ್ ಮ್ಯಾಥ್ಯೂ, ಕಾರ್ತಿಕೇಯನ್ ಪೆರಿಯ, ಡಿಸಿಸಿ ಪದಾಧಿಕಾರಿಗಳಾದ ಬಿ.ಪಿ.ಪ್ರದೀಪ್ ಕುಮಾರ್, ಎಂ.ಸಿ.ಪ್ರಭಾಕರನ್, ಸಿ.ವಿ.ಜೇಮ್ಸ್, ಮಂಡಲ ಕಾಂಗ್ರೆಸ್ ಅಧ್ಯಕ್ಷ ರಜಾಕ್ ಮಾಸ್ಟರ್, ಯುವ ಕಾಂಗ್ರೆಸ್ ಜಿಲ್ಲಾ ಪದಾಧಿಕಾರಿಗಳಾದ ಶ್ರೀನಾಥ್ ಬದಿಯಡ್ಕ, ಸುಜಿತ್, ರಜಿತಾ, ಉಕೇಶ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು. ವಕೀಲ ರಂಜಿತ್ ಕುಂಟಾರ್ ಸ್ವಾಗತಿಸಿದರು. ಸೂರಜ್ ಕಾರಡ್ಕ ವಂದಿಸಿದರು.