ಕೊಚ್ಚಿ: ಕೆಎಸ್‍ಇಬಿ ಕಾರ್ಯವೈಖರಿ ಬಗ್ಗೆ ಯಾರಾದರೂ ವಾಸ್ತವಿಕ ಟೀಕೆಗಳನ್ನು ಎತ್ತಿದರೆ ಸ್ವೀಕರಿಸಲಾಗುವುದು ಎಂದು ವಿದ್ಯುತ್ ಇಲಾಖೆ ಸಚಿವ ಕೆ.ಕೃಷ್ಣನ್ ಕುಟ್ಟಿ ಹೇಳಿರುವರು. ಹಗಲಿರುಳು ದುಡಿಯುವ ನೌಕರರ ಕಷ್ಟವನ್ನೂ ಅರ್ಥ ಮಾಡಿಕೊಳ್ಳಬೇಕು. ಆಗಾಗ ವಿದ್ಯುತ್ ಲೈನ್ ಸ್ವಿಚ್ ಆಫ್ ಮಾಡದೆ ಜನರಿಗೆ ತೊಂದರೆಯಾಗದಂತೆ ಕೆಲಸ ಮಾಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸಿ ಸಾವು ನೋವುಗಳು ಸಂಭವಿಸುತ್ತವೆ ಎಂದು ಕೊಚ್ಚಿಯಲ್ಲಿ ಹೇಳಿದರು.
ಕಚೇರಿಗಳಲ್ಲಿ ಅತಿಕ್ರಮ ಪ್ರವೇಶ ಸ್ವೀಕಾರಾರ್ಹವಲ್ಲ. ಮಳೆ ತೀವ್ರಗೊಂಡಿರುವುದರಿಂದ 1912 ಟೋಲ್ ಪ್ರೀ ಸಂಖ್ಯೆ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ ಎಂದು ಸಚಿವರು ತಿಳಿಸಿದರು.
ಸಾರ್ವಜನಿಕ ವಲಯದ ಸಂಸ್ಥೆಯನ್ನು ಸಮರ್ಥವಾಗಿಸಲು ಆರ್ಥಿಕ ಶಿಸ್ತು ಅಗತ್ಯ. ಈಗಿರುವ ಆದಾಯದ ಅಂತರವನ್ನು ಹಂತ ಹಂತವಾಗಿ ಕಡಮೆ ಮಾಡಬೇಕು. 13,000 ಕೋಟಿ ವಿದ್ಯುತ್ ಖರೀದಿಯನ್ನು ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ. ಇಡುಕ್ಕಿಯಿಂದ 55 ಪೈಸೆಗೆ ಒಂದು ಯೂನಿಟ್ ವಿದ್ಯುತ್ ಲಭ್ಯವಿದೆ. ಆದರೆ ಪೀಕ್ ಸಮಯದಲ್ಲಿ ಹೊರಗಿನಿಂದ ಖರೀದಿಸಲು 8 ರಿಂದ 15 ರೂ.ವೆಚ್ಚವಾಗುತ್ತದೆ. ಯೋಜನೆಗೆ ಚಿಂತನೆ ಮಾಡಿದರೆ ಪರಿಸರಕ್ಕೆ ಹಾನಿ ಎಂದು ಉತ್ಪ್ರೇಕ್ಷೆ ಮಾಡಿ ಅಡ್ಡಿಪಡಿಸುತ್ತಾರೆ. ಎಂದು ಸಚಿವರು ಹೇಳಿದರು.