ಕಾಸರಗೋಡು: ಕರ್ನಾಟಕ ನಾಟಕ ಅಕಾಡೆಮಿಯ ಮಾನ್ಯತೆ ಪಡೆದ ವಿಕೆಎಂ ಕಲಾವಿದರ ವತಿಯಿಂದ ವಷರ್ಂಪ್ರತಿ ನೀಡಲ್ಪಡುವ ಪ್ರತಿಷ್ಠಿತ "ಸಿದ್ದಾರ್ಥ ಪ್ರಶಸ್ತಿ"ಯನ್ನು ಕಾಸರಗೋಡಿನ ಸಾಂಸ್ಕøತಿಕ ,ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮುಂದಾಳು ಕೆ.ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಅವರ ಸ್ಮಾರಕ ನಾಟಕೋತ್ಸವ ಮತ್ತು ಸಾಂಸ್ಕೃತಿಕ ಕಲಾ ಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಸಮರಂಭ ನಡೆಯಿತು. ಚಿತ್ರ ನಿರ್ಮಾಪಕ ಡಾ.ಎ.ರಾಧಕೃಷ್ಣ ರಾಜು, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ವಿಠಲ್ ಕೊಪ್ಪದ್, ಹಿರಿಯ ರಂಗಭೂಮಿ ಕಲಾವಿದೆ ಕಮನೀಧರನ್, ಹಿರಿಯ ರಂಗತಜ್ಞ ಕಪ್ಪಣ್ಣ ಜಿ.ಶ್ರೀನಿವಾಸ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ, ಆರ್ ಲಕ್ಷಿದೇವಿ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ನಾಲ್ಕು ದಶಕಗಳಿಂದ ಕಾಸರಗೋಡಿನಲ್ಲಿ ಯಕ್ಷಗಾನ ಕ್ಷೇತ್ರವನ್ನು ಕಟ್ಟಿ ಬೆಳೆಸುವಲ್ಲಿ ಸಕ್ರಿಯರಾಗಿರುವ ಕೆ.ಎನ್ ವೆಂಕಟ್ರಮಣ ಹೊಳ್ಳ ಅವರು ಶ್ರೀವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷ ಕಲಾ ಸಂಘವನ್ನು ತನ್ನ ಸಹೋದರರ ಜತೆಗೂಡಿ ಮುನ್ನಡೆಸುತ್ತಿದ್ದು ಗಡಿನಾಡಿನ ಕನ್ನಡ ಮಕ್ಕಳಿಗೆ ಯಕ್ಷಗಾನ ತರಬೇತಿಯ ಜತೆಗೆ ವೇಷಭೂಷಣಗಳನ್ನು ಒದಗಿಸುವ ಮೂಲಕ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುತ್ತ ಬರುತ್ತಿದ್ದಾರೆ.