ಕಾಸರಗೋಡು: ಜಿಲ್ಲೆಯ ಎಲ್ಲಾ ಪಾಲಿಟೆಕ್ನಿಕ್ ಕಾಲೇಜುಗಳಿಗೆ ೨೦೨೪-೨೫ನೇ ಸಾಲಿನ ನಿಯಮಿತ ಪಾಲಿಟೆಕ್ನಿಕ್ ಡಿಪ್ಲೋಮಾ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ (ಸ್ಟ್ರೀಮ್೧) ಪ್ರವೇಶವನ್ನು ಜುಲೈ ೩೦ ರಂದು ಕಾಸರಗೋಡು ಪೆರಿಯದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆಯಲಿದೆ.
ವೇಳಾಪಟ್ಟಿಯನ್ನು ಅನುಸರಿಸಿ ಅಬ್ಯರ್ಥಿಗಳು ಸ್ಪಾಟ್ ಅಡ್ಮಿಷನ್‌ಗಾಗಿ ಪೆರಿಯಾಪಾಲಿಟೆಕ್ನಿಕ್ ಕಾಲೇಜಿಗೆ ಹಾಜರಾಗಬೇಕಾಗಿದೆ.ಸರಣಿ ಸಂಖ್ಯೆ ೧ ರಿಂದ ೨೫೦೦೦ರ ವರೆಗಿನ ರ‍್ಯಾಂಕ್‌ನವರಿಗೆ ೯ ರಿಂದ ೧೦ ಗಂಟೆ, ೨೫೦೦೧ ರಿಂದ ೩೫೦೦೦ ರ‍್ಯಾಂಕ್‌ನವರಿಗೆ ೧೦ ರಿಂದ ೧೧ ರವರೆಗೆ, ೩೫೦೦೧ರಿಂದ ಸ್ಪಾಟ್ ಅಡ್ಮಿಶನ್‌ಗೆ ನೋಂದಾಯಿಸಿದ ಕೊನೇ ಸಂಖ್ಯೆ ವರೆಗಿನ ಅಭ್ಯರ್ಥಿಗಳಿಗೆ ೧೧ಗಂಟೆಯಿAದ ೧೨ ಗಂಟೆಯ ನಡುವೆ ಅಡ್ಮಿಷನ್ ನಡೆಯುವುದು.ರ‍್ಯಾಂಕ್ ಕ್ರಮಾಂಕದಲ್ಲಿ ಮೀಸಲಾತಿ ವ್ಯವಸ್ಥೆ ಅನುಸರಿಸಿ ಖಾಲಿ ಇರುವ ಸೀಟಿಗೆ ಪ್ರವೇಶ ನೀಡಲಾಗುವುದು. ಪ್ರವೇಶದ ಸಮಯದಲ್ಲಿ ಅರ್ಹತೆಯನ್ನು ಸಾಬೀತುಪಡಿಸುವ ಮೂಲ ದಾಖಲೆಯನ್ನು ಸಲ್ಲಿಸಬೇಕು. ಹಿಂದಿನ ಪ್ರವೇಶದ ನಂತರ ಸಂಸ್ಥೆ ಅಥವಾ ಶಾಖೆಯ ಬದಲಾವಣೆಯ ಸಂದರ್ಭದಲ್ಲಿ ಶುಲ್ಕಪಾವತಿ ರಸೀದಿ ಮತ್ತು ಪ್ರವೇಶ ಪತ್ರವನ್ನು ಹಾಜರುಪಡಿಸಬೇಕು.
ಪ್ರವೇಶಕ್ಕೆ ಅರ್ಹತಾ ಪ್ರಮಾಣ ಪತ್ರದೊಂದಿಗೆ ಎಸ್ಸೆಸೆಲ್ಸಿ ಪ್ರಮಾಣ ಪತ್ರ, ಟಿಸಿ, ಗುಣನಡತೆ ಪ್ರಮಾಣ ಪತ್ರ ಹಾಜರುಪಡಿಸಬೇಕು. ಜಾತಿ ಮೀಸಲಾತಿಗೆ ಅರ್ಹರಾಗಿರುವ ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ತಹಸೀಲ್ದಾರ್ ನೀಡಿದ ಜಾತಿ ಪ್ರಮಾಣಪತ್ರ ಮತ್ತು ಎಸ್‌ಎಸ್‌ಎಲ್‌ಸಿ ಪುಸ್ತಕದಲ್ಲಿ ಜಾತಿ ನಮೂದಿಸದಿದ್ದಲ್ಲಿ ಸಂಬAಧಪಟ್ಟ ಪ್ರಾಧಿಕಾರದಿಂದ ನೀಡಲಾದ ಇತರ ಜಾತಿ ಮೀಸಲಾತಿ ವರ್ಗದ ಜಾತಿ ಪ್ರಮಾಣಪತ್ರ,ಆರ್ಥಿಕ ಮೀಸಲಾತಿಗೆ ಅರ್ಹರಾಗಿರುವ ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ ಆದಾಯ ಪ್ರಮಾಣಪತ್ರ/ನಾನ್-ಕ್ರಿಮಿಲಿಯರ್ ಪ್ರಮಾಣಪತ್ರ (ಅನ್ವಯಿಸಿದರೆ ಮಾತ್ರ) ಮತ್ತು ಇಡಬ್ಲೂö್ಯಎಸ್ ಪ್ರಮಾಣಪತ್ರ, ವಾರ್ಷಿಕ ಆದಾಯ ೧ ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಶುಲ್ಕ ವಿನಾಯಿತಿ ಸಿಗಲಿದ್ದು, ಅದಕ್ಕಾಗಿ ಒಂದು ವರ್ಷದೊಳಗೆ ಲಭ್ಯ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ಟಿಸಿ ಮತ್ತು ಗುಣನಡತೆ ಸರ್ಟಿಫಿಕೇಟ್ ಪಡೆಯದವರಿಗೆ ಇದನ್ನು ಸಲ್ಲಿಸಲು ತಯಾರಿ ಸಮಯಾವಕಾಶ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮತ್ತು ಶುಲ್ಕದ ಲಾಭ ಪಡೆಯಲು ಅರ್ಹರು ಸುಮಾರು ರೂ.೪೫೦೦ ಮತ್ತು ಇತರರು ರೂ.೭೫೦೦ ಶುಲ್ಕವನ್ನು ಪಾವತಿಸಬೇಕು. ಶುಲ್ಕವನ್ನು ಯುಪಿಐ/ಎಟಿಎಂ ಕಾರ್ಡ್ ಮೂಲಕ ಪಾವತಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದುರವಾಣಿ ಸಂಖ್ಯೆ(೦೪೬೭ ೨೨೩೪೦೨೦, ೭೫೬೧೦೮೩೫೯೭, ೯೪೪೬೧೬೮೯೬೯)ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.