ಪೆರ್ಲ: ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ವತಿಯಿಂದ ಸಮತಾ ಸಾಹಿತ್ಯ ವೇದಿಕೆ ಪಾಣಾಜೆ ಸಹಯೋಗದೊಂದಿಗೆ ಆಟಿಕೂಟ ಆ. ೪ರಂದು ಬೆಳಗ್ಗೆ ೧೦.೩೦ಕ್ಕೆ ಪೆರ್ಲ ಸನಿಹದ ಬೆದ್ರಂಪಳ್ಳ ಪರಿಶ್ರಮ ಗಾರ್ಡನ್ಸ್ ನವಜೀವನದಲ್ಲಿ ಜರುಗಲಿದೆ.
ವಿಶ್ರಾಂತ ಪ್ರಾಧ್ಯಾಪಕ, ಲೇಖಕ ಡಾ. ಕೆ. ಕಮಲಾಕ್ಷ ಸಮಾರಂಭ ಉದ್ಘಾಟಿಸುವರು. ಹಿರಿಯ ಪತ್ರಕರ್ತ ಬಿ.ಪಿ ಶೇಣಿ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ, ಲೇಖಕಿ ವಿಜಯಲಕ್ಷಿö್ಮÃ ಕಟೀಲು ಉಪನ್ಯಸ ನೀಡುವರು. ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಟೀಮ್ ಕನ್ನಡ ಯುಟ್ಯೂಬ್ ಚಾನಲನ್ನು ಕಾಸರಗೋಡು ಸರ್ಕಾರಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಬಿಡುಗಡೆಗೊಳಿಸುವರು.
ಈ ಸಂದರ್ಭ ನಡೆಯುವ 'ಆಷಾಡ-ಕವಿ ಸಮಯ' ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸಕ, ಲೇಖಕ ಟಿ.ಎ.ಎನ್ ಖಂಡಿಗೆ ಅಧ್ಯಕ್ಷತೆ ವಹಿಸುವರು. ಕವಿ, ಹಿರಿಯ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಪಾಳ್ಗೊಳ್ಳುವರು.