ಕೊಚ್ಚಿ: ಮಂಜುಮ್ಮಲ್ ಬಾಯ್ಸ್ ನಿರ್ಮಾಪಕ ಹಾಗೂ ನಟ ಸೌಬಿನ್ ಶಾಹಿರ್ ಪಾಲು ಹೊಂದಿರುವ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ ತಪಾಸಣೆ ನಡೆಸಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಸಂಸ್ಥೆಯನ್ನು ತನಿಖೆ ನಡೆಸುತ್ತಿದೆ. ಉಪಯೋಗಿಸಿದ ಕಾರು ಶೋರೂಂನಲ್ಲಿ ಇಡಿ ತಪಾಸಣೆ.
ನಿನ್ನೆ ಬೆಳಗ್ಗೆ 11 ಗಂಟೆಗೆ ತಪಾಸಣೆ ಆರಂಭವಾಯಿತು. ಇಡಿ ಅಧಿಕಾರಿಗಳು ಸಂಸ್ಥೆಯ ಮಾಲೀಕ ಮುಜೀಬ್ ರೆಹಮಾನ್ ಅವರನ್ನು ವಿಚಾರಣೆ ನಡೆsಟಂಥಿiಣu. ಮಲಪ್ಪುರಂ, ಎರ್ನಾಕುಐಂ, ತಿರುವನಂತಪುರಂ ಮತ್ತು ಕೋಎiಕ್ಕೋಡ್ ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಚಿತ್ರಕ್ಕೆ ಸಂಬಂಧಿಸಿದ ಹಣಕಾಸು ವಂಚನೆ ದೂರು ಹಾಗೂ ಪರವ ಫಿಲಂಸ್ ಸಂಸ್ಥೆ ಕಪ್ಪುಹಣವನ್ನು ಬಿಳಿ ಮಾಡಿಕೊಂಡಿರುವ ದೂರಿಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ತಿಂಗಳು ಇಡಿ ಕೊಚ್ಚಿಯಲ್ಲಿರುವ ತನ್ನ ಕಚೇರಿಗೆ ಸೌಬ್ ಅವರನ್ನು ಕರೆಸಿ ವಿಚಾರಣೆ ನಡೆಸಿತ್ತು.