ಕಾಸರಗೋಡು: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಗ್ರತಾ ನಿರ್ದೇಶ ನೀಡಿದೆ. ಪನತ್ತಡಿ ಗ್ರಾಮದ ಕಮ್ಮಾಡಿ ಹೊಳೆಯಲ್ಲಿ ನೀರಿನಮಟ್ಟ ಏರಿಕೆಯಗುತ್ತಿದ್ದು, ನೆರೆನೀರು ನುಗ್ಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜು.೩೧ರ ವರೆಗೆ ರೆಡ್ ಅಲರ್ಟ್ ಮುಂದುವರಿಯುವ ಸಾಧ್ಯತೆಯಿದ್ದಲ್ಲಿ, ಈ ಪ್ರದೇಶದ ಕೆಲವು ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಎಣ್ಣಪಾರದಲ್ಲಿ ಭೂಕುಸಿತದ ಭೀತಿ ಎದುರಾಗಿದ್ದು, ಜಿಲ್ಲಾ ಪಂಚಾಯಿತಿ ರಸ್ತೆ ಕುಸಿತಕ್ಕೀಡಾಗಿರುವುದಾಗಿ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಮಾಹಿತಿ ನೀಡಿದರು. ಅತಿವೃಷ್ಟಿ ಸಂದರ್ಭದಲ್ಲಿ ಸಮಸ್ಯೆ ಪೀಡಿತ ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಕಾರ್ಯಾಚರಣೆ ನಡೆಸಬೇಕು ಎಂದು ಅಧ್ಯಕ್ಷರು ಮನವಿಮಾಡಿದರು.
ಕಳ್ಳಾರ್ ಕುಟ್ಟಿಕಾನ ಕಾಲೋನಿಯಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಪ್ರದೇಶದ ೧೦ ಕುಟುಂಬಗಳ ೩೫ಮಂದಿ ಸದಸ್ಯರನ್ನು ತುರ್ತು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಚುಲ್ಲಿಕ್ಕರ ಜಿಎಲ್‌ಪಿಎಸ್‌ಗೆ ಸ್ಥಳಾಂತರಿಸುವ ಬಗ್ಗೆ ವೆಳ್ಳರಿಕುಂಡ್ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಕಾಸರಗೋಡು ತಾಲೂಕಿನಲ್ಲಿ ಚೆರ್ಕಳದಿಂದ ಚಟ್ಟಂಚಾಲ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಚಟ್ಪಥ ಕಾಮಗಾರಿಯಲ್ಲಿ ಭಾರೀ ಭೂಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸಂಬAಧಪಟ್ಟ ಅಧಿ ಕಾರಿಗಳಿಗೆ ಸೂಚಿಸಿದರು.
ಮಂಜೇಶ್ವರ ತಾಲೂಕಿನ ಆನೆಕಲ್ಲು ಎಂಬಲ್ಲಿ ಅಕೇಶಿಯಾ ಮರಗಳು ರಸ್ತೆಗೆ ಬಿದ್ದು ಕೆಎಸ್‌ಇಬಿ ಲೈನ್‌ಗಳ ಮೇಲೆ ಬಿದ್ದು ಹಾನಿಯಾಗಿದೆ. ಮಧೂರು ಮಧುವಾಹಿನಿಪುಳ ತುಂಬಿ ಹರಿಯುವ ಸಾಧ್ಯತೆ ಇದ್ದು, ತಗ್ಗುಪ್ರದೇಶದ ಜನತೆ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯ ವಿವಿಧ ತಲೂಕು ಕೇಂದ್ರಗಳಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿ ತೆರೆಯಲಾಗಿದೆ.
ಆರೋಗ್ಯ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಜಾಗ್ರತಾ ಸ್ಥಿತಿಯಲ್ಲಿರುವಂತೆಯೂ ಸಊಚಿಸಲಾಗಿದೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಹೆಚ್ಚುವರಿ ಎಸ್.ಪಿ. ಪಿ.ಬಾಲಕೃಷ್ಣನ್ ನಾಯರ್, ಕಾಸರಗೋಡು ಆರ್‌ಡಿಒ ಪಿ. ಬಿನುಮೋನ್, ಎನ್‌ಎಚ್‌ಎಐ ಲೈಸನ್ ಅಧಿಕಾರಿ ಸೇತುಮಾಧವನ್ ಮೊದಲದ್ವರು ಉಪಸ್ಥಿತರಿದ್ದರು.
ಇಂದು ಶಿಕ್ಷಣ ಸಂಸ್ಥೆಗಳಿಗೆ ರಜೆ:
ಕಾಸರಗೋಡು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಝುಗಳು, ವೃತ್ತಿಪರ ಕಾಲೇಜುಗಳು, ರಾಜ್ಯ, ಸಿಬಿಎಸ್‌ಇ, ಎಸ್‌ಸಿಎಸ್‌ಇ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಅಂಗನವಾಡಿಗಳು, ಮದರಸಾಗಳು ಇತ್ಯಾದಿ ಶಿಕ್ಷಣ ಸಂಸ್ಥೆಗಳಿಗೆ ಜು. ೩೧ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ ಇನ್ಬಾಶೇಖರ್ ಅದೇಶ ಹೊರಡಿಸಿದ್ದಾರೆ. ಪೂಈರ್ವನಿಗದಿತ ಪರೀಕ್ಷೆಗಳು ಯಥಾಪ್ರಕಾರ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.